ಭಟ್ಕಳ(Bhatkal): ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶಿಕ್ಷಕರ ದಿನಾಚರಣೆಯ (Teacher’s day) ಅಂಗವಾಗಿ ಶಿಕ್ಷಕ/ಶಿಕ್ಷಕಿಯರಿಗೆ ಹಾಗೂ ಕಾಲೇಜು ಉಪನ್ಯಾಸಕರಿಗೆ ಕವನ ರಚನಾ (poetry writing) ಸ್ಪರ್ಧೆ ಆಯೋಜಿಸಲಾಗಿದೆ.”ಮಾನವನ ವಿಕೃತಿ – ನಲುಗಿದ ಪ್ರಕೃತಿ” ಎಂಬ ವಿಷಯದ ಕುರಿತು ಕವನ ರಚನಾ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಯು ಪ್ರಾಥಮಿಕ, ಪ್ರೌಢಶಾಲಾ ಹಾಗೂ ಕಾಲೇಜು – ಈ ಮೂರು ವಿಭಾಗಗಳಿಗೆ ಪ್ರತ್ಯೇಕ ಇರಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿಕ್ಷಕರು/ಉಪನ್ಯಾಸಕರು ತಮ್ಮ ಸ್ವರಚಿತ ಕವಿತೆಯನ್ನು, ಮುದ್ರಿಸಿ ಅಥವಾ ಅಂದವಾದ ಕೈ ಬರಹದೊಂದಿಗೆ ದ್ವಿಪ್ರತಿಯಲ್ಲಿ ನೀಡಬೇಕು. ಅದರಲ್ಲಿ ಒಂದು ಪ್ರತಿಯ ಹಿಂಭಾಗದಲ್ಲಿ ಮಾತ್ರ ತಮ್ಮ ಹೆಸರು, ಶಾಲೆ,/ ಕಾಲೇಜು, ವಿಳಾಸ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಿ ಸ್ವರಚಿತ ಕವಿತೆಯ ದ್ವಿಪ್ರತಿಯನ್ನು ಲಕೋಟೆಯಲ್ಲಿರಿಸಿ ಅಶೋಕ ಆಚಾರಿ, ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಭಟ್ಕಳ ಇವರ ಬಳಿ ಸೆಪ್ಟೆಂಬರ್ ಎರಡನೇ ತಾರೀಖಿನ ಸಂಜೆ ೫ ಗಂಟೆ ಒಳಗೆ ತಲುಪಿಸಬೇಕು.
ಇದನ್ನೂ ಓದಿ : ಶಿವಮೊಗ್ಗ ಜೈಲಿಗೆ ಪೊಲೀಸರ ದಿಢೀರ್ ದಾಳಿ
ಕವನ ರಚನಾ (poetry writing) ಸ್ಪರ್ಧಾ ವಿಜೇತರಿಗೆ ಶಿಕ್ಷಕರ ದಿನಾಚರಣೆಯಂದು ಶಿಕ್ಷಣ ಇಲಾಖೆಯಿಂದ ನಡೆಯುವ ಗುರುವಂದನಾ ಕಾರ್ಯಕ್ರಮದಲ್ಲಿ ಪುಸ್ತಕ ಬಹುಮಾನ ಮತ್ತು ಪ್ರಮಾಣ ಪತ್ರ ನೀಡಲಾಗುವುದು ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಗಂಗಾಧರ ನಾಯ್ಕ, ಅಧ್ಯಕ್ಷರು, ಕಸಾಪ (೮೩೧೦೦೯೩೧೯೮) ಅಥವಾ ಶ್ರೀಧರ ಶೇಟ, ಗೌರವ ಕೋಶಾಧ್ಯಕ್ಷರು, ಕಸಾಪ (೯೧೪೧೧೧೧೬೧೧) ಇವರನ್ನು ಸಂಪರ್ಕಿಸಲು ಕೋರಲಾಗಿದೆ.