ಭಟ್ಕಳ: ತಾಲೂಕಿನ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ೬೩ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವವು (Pratishtha vardhanthi) ದಿನಾಂಕ: ೨೬-೧-೨೦೨೬ನೇ ಸೋಮವಾರದಿಂದ ದಿನಾಂಕ: ೨೮-೧-೨೦೧೬ನೇ ಬುಧವಾರದವರೆಗೆ ಹಮ್ಮಿಕೊಳ್ಳಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾ ಸ್ವಾಮೀಗಳವರ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ, ಶ್ರೀ ವಿಶ್ವಕರ್ಮ ಜಗದ್ಗುರು ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಗಳವರ ಶುಭಾಶೀರ್ವಾದ ಪೂರ್ವಕ ಕಾರ್ಯಕ್ರಮ (Pratishtha vardhanthi) ನೆರವೇರಲಿರುವುದು ಎಂದು ಆಡಳಿತ ಮೊಕ್ತೇಸರರಾದ ಗಜಾನನ ನಾಗಪ್ಪಯ್ಯ ಆಚಾರ್ಯ ವೆಂಕಟಾಪುರ, ಗೋವಿಂದ ಮಂಜುನಾಥ ಆಚಾರ್ಯ ಕವೂರು, ಶಿವರಾಮ ದೇವಪ್ಪ ಆಚಾರ್ಯ ಶಿರೂರು ತಿಳಿಸಿದ್ದಾರೆ.

ಇದನ್ನು ಓದಿ: Murudeshwar/ ಮುರುಡೇಶ್ವರದಲ್ಲಿ ಜೂಜಾಡುತ್ತಿದ್ದ ಇಬ್ಬರ ಬಂಧನ 

ಜನವರಿ ೨೬ರ ರಾತ್ರಿ ದೇವತಾ ಪ್ರಾರ್ಥನೆ, ವಾಸ್ತು, ರಾಕ್ಷೆಜ್ಞ, ನವಗ್ರಹ ಹೋಮಾದಿಗಳು ನಡೆಯಲಿವೆ. ಜನವರಿ ೨೭ರ ಮಂಗಳವಾರ ಬೆಳಿಗ್ಗೆ ನವಕ ಕಲಾ ಹೋಮ ಕಲಶಾಭಿಷೇಕ, “ತುಲಾಭಾರ ಸೇವೆ”, ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆ ಜರುಗುವುದು. ಜನವರಿ 28ರ ಬುಧವಾರ ಬೆಳಿಗ್ಗೆ ಅಮ್ಮನವರಿಗೆ ಪವಮಾನ ಸೂಕ್ತಾಭಿಷೇಕ, “ಶ್ರೀ ಚಂಡಿಕಾಹೋಮ” ಆರಂಭವಾಗಲಿದೆ. ಮಧ್ಯಾಹ್ನ ೧೨-00 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ, ಪ್ರಾರ್ಥನೆ ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ, ಬ್ರಾಹ್ಮಣ ಸಂಭಾವನೆ “ಸಂತರ್ಪಣೆ” ನಡೆಯಲಿದೆ. ರಾತ್ರಿ ಮಹಾಪೂಜೆ, ಪ್ರಸಾದ ವಿತರಣೆ ಇರುವುದು.

ಇದನ್ನು ಓದಿ: best service/ ಕಾಯ್ಕಿಣಿ ಗ್ರಾಮ ಆಡಳಿತಾಧಿಕಾರಿಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ

ಇದಕ್ಕೂ ಮೊದಲು ಸಾಯಂಕಾಲ ೪ ಗಂಟೆಗೆ ನಡೆಯುವ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸುವ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು (ಶ್ರೀಮದ್ ಜಗದ್ಗುರು ಆನೇಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು) ಆಶೀರ್ವಚನ ನೀಡಲಿದ್ದಾರೆ. ವೆಂಕಟಾಪುರ ಶ್ರೀ ಕ್ಷೇತ್ರದ ಆಡಳಿತ ಮೊಕ್ತಸರ ಗಜಾನನ ನಾಗಪ್ಪಯ್ಯ ಆಚಾರ್ಯ ಅಧ್ಯಕ್ಷತೆ ವಹಿಸುವರು. ಪಡುಕುತ್ಯಾರು ಶ್ರೀಮದ್ ಜಗದ್ಗುರು ಆನೇಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪ್ರಧಾನ ಕಾರ್ಯದರ್ಶಿ ಲೋಕೇಶ ಎಂ ಬಿ ಆಚಾರ್ ಕಂಬಾರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ ಸುಜ್ಞಾನಮೂರ್ತಿ, ಬೆಂಗಳೂರಿನ (Bengaluru) ಕರ್ನಾಟಕ ವಿಶ್ವಕರ್ಮ ಜನಸೇವಾ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಚೌಥನಿಯ ದಿ ನಾಗಪ್ಪಯ್ಯ ಮಂಜಯ್ಯ ಆಚಾರ್ಯ ಮತ್ತು ಮಣಕುಳಿಯ ದಿ ರಾಮ ಅಣ್ಣಪ್ಪ ಆಚಾರ್ಯ ಅವರಿಗೆ ಮರಣೋತ್ತರ ಗೌರವ ಸಮರ್ಪಣೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಚೌಥನಿಯ ಶ್ರೀ ಕಾಳಿಕಾಂಬಾ ದೇವಸ್ಥಾನದ ೨ನೇ ಆಡಳಿತ ಮೊಕ್ತೇಸರ ಮುಂಡಳ್ಳಿಯ ಮಂಜುನಾಥ ಲಕ್ಷ್ಮಣ ಆಚಾರ್ಯ, ಕೋಟೇಶ್ವರ ಎಸ್.ಕೆ.ವಿ.ಎಮ್.ಎಸ್. ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರಾದ ತೆರ್ನಮಕ್ಕಿಯ ಡಾ ಪ್ರೇಮಾ ಎನ್ ಆಚಾರಿ, ಮುಂಬೈನ ಸಿಎ ಮಿಥುನ್ ಮಾರುತಿ ಆಚಾರ್ಯ ಅವರನ್ನು ಸನ್ಮಾನಿಸಲಾಗುತ್ತದೆ.

ಇದನ್ನು ಓದಿ: National Voters Day/ ರಾಷ್ಟ್ರೀಯ ಮತದಾರರ ದಿನಾಚರಣೆ, ಸವಿತಾ ಮಹರ್ಷಿ ಜಯಂತಿ