ಭಟ್ಕಳ: ಹೆದ್ದಾರಿಯಲ್ಲಿ (Highway) ಸಂಚರಿಸುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿದ್ದ ಯುವಕನನ್ನು ಭಟ್ಕಳ (Bhatkal) ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ (arrested).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಾಲೂಕಿನ ಹುರುಳಿಸಾಲ ನಿವಾಸಿ ಅಬ್ದುಲ್ ಸಲಾ ತಂದೆ ಮೊಹಮ್ಮದ್ ಸಲಿಂ( ೨೩) ಬಂಧಿತ ಆರೋಪಿ (arrested). ತಾಲೂಕಿನ ರಾಜ್ಯ ಹೆದ್ದಾರಿ ಸಾಗರ ರಸ್ತೆಯ (Sagar Road) ಗುಳಮಿ ಕ್ರಾಸ್ ಸಮೀಪದಲ್ಲಿ ಸ್ವಿಫ್ಟ್ ಕಾರಿನಲ್ಲಿ ಕುಳಿತು ದರೋಡೆ ಮಾಡಲು ಸಂಚು ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Draft notification/ ಭಟ್ಕಳ ನಗರಸಭೆಗೆ ವಾರ್ಡ್ ವಿಂಗಡಣೆ: ಕರಡು ಅಧಿಸೂಚನೆ ಪ್ರಕಟ
ಕಾರಿನಲ್ಲಿ ಚಾಕು, ಮಂಕಿ ಕ್ಯಾಪ್, ಪಕ್ಕಡ್, ಖಾರದ ಪುಡಿ, ಟಾರ್ಚ್ ಸೇರಿದಂತೆ ದರೋಡೆಗೆ ಬಳಸುವ ವಿವಿಧ ವಸ್ತುಗಳನ್ನು ಇಟ್ಟುಕೊಂಡಿದ್ದನು. ರಾತ್ರಿ ವೇಳೆ ಒಬ್ಬಂಟಿಯಾಗಿ ಸಂಚರಿಸುವ ಜನರನ್ನು ತಡೆದು ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕಸಿದುಕೊಳ್ಳುವ ಉದ್ದೇಶ ಹೊಂದಿದ್ದನೆಂದು ತಿಳಿದುಬಂದಿದೆ. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಭಟ್ಕಳ ಗ್ರಾಮೀಣ ಠಾಣೆ ಸಿಪಿಐ ವೆಂಕಟೇಶ ಮುರನಾಳ ನೇತೃತ್ವದ ಪೊಲೀಸ್ ತಂಡ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದೆ.
LPG bookings/ ಪೆಟ್ರೋಲ್ ಆಯ್ತು, ಭಟ್ಕಳದಲ್ಲಿ ಎಲ್‌ಪಿಜಿ ಬುಕಿಂಗ್‌ನಲ್ಲೂ ಏರಿಕೆ



