ಕಾರವಾರ : ಉತ್ತರಕನ್ನಡ (Uttara Kannada) ಜಿಲ್ಲೆಗೆ ಜೂ.೧೧ರಿಂದ ೧೭ರವರೆಗೆ ರೆಡ್ ಅಲರ್ಟ್ (Red Alert) ಘೋಷಿಸಿರುವುದರಿಂದ ನಿರಂತರ ಮಳೆಯಾಗುತ್ತಿರುವ (heavy rain) ಹಿನ್ನೆಲೆಯಲ್ಲಿ ಕರಾವಳಿ (coastal) ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಜೂ.೧೨ರಂದು ರಜೆ ಘೋಷಿಸಲಾಗಿದೆ (School holiday).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಕ್ಕಳ ಹಿತದೃಷ್ಟಿಯಿಂದ ರೆಡ್ ಅಲರ್ಟ್ ನಮಯದಲ್ಲಿ ಶಾಲೆ ಮತ್ತು ಅಂಗನವಾಡಿ ಮಕ್ಕಳಿಗೆ ಅನಾನುಕೂಲವಾಗದಂತೆ ಹಾಗೂ ಅವಘಡಗಳು ಸಂಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ರಜೆ ಘೋಷಿಸಲಾಗಿದೆ. ಕಾರವಾರ, ಅಂಕೋಲಾ (Ankola), ಕುಮಟಾ (Kumta), ಹೊನ್ನಾವರ (Honnavar) ಮತ್ತು ಭಟ್ಕಳ (Bhatkal) ತಾಲೂಕಿನಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಹಾಗೂ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದೆ (School holiday).
ಇದನ್ನೂ ಓದಿ : Red Alert / ಮೂರು ದಿನ ರೆಡ್ ಅಲರ್ಟ್ !