ಕಾರವಾರ (Karwar) :  ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ (Olive Ridley) ಆಮೆಗಳು (turtle) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಮಾಡಿಕೊಂಡಿದ್ದು ಇದೀಗ ಈ ಮೊಟ್ಟೆಗಳು ಅರಣ್ಯ ಇಲಾಖೆಯ (Forest Department) ಮುತುವರ್ಜಿಯಿಂದ ರಕ್ಷಣೆಗೊಳಪಟ್ಟು ಕಡಲು ಸೇರುತ್ತಿವೆ. ನಗರದ ಟಾಗೋರ್ ಕಡಲ ತೀರದಲ್ಲಿ (Tagore Beach) ಶನಿವಾರ ನೂರಾರು ಕಡಲಾಮೆ ಮರಿಗಳು ಕಡಲಿಗೆ ಸೇರಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

೧೪೦ ಕೀ.ಮೀ ಗೂ ಅಧಿಕ ವ್ಯಾಪ್ತಿಯ ಕಡಲತೀರವನ್ನ ಹೊಂದಿರುವ ಉತ್ತರ ಕನ್ನಡ ಜಿಲ್ಲೆ, ಸಹಸ್ರಾರು ವೈವಿಧ್ಯಮಯ ಜೀವಿಸಂಕುಲಗಳ ವಾಸಸ್ಥಾನವಾಗಿದೆ. ವಿವಿಧ ಜಾತಿಯ ಮೀನುಗಳು, ಕಪ್ಪೆಚಿಪ್ಪು, ನೀಲಿಕಲ್ಲು, ವೈಟ್ ಸ್ಟಾರ್, ಆಲಿವ್ ರಿಡ್ಲೆ ಆಮೆಗಳು, ಡಾಲ್ಪಿನ್ ಹೀಗೆ ಹಲವು ವೈವಿಧ್ಯಮಯ ಜೀವಿಗಳ ವಾಸಸ್ಥಾನವಾಗಿದೆ.

ಇದನ್ನೂ ಓದಿ : Librarian / ಗ್ರಂಥಪಾಲಕಿಗೆ ಕಾಯಂ ಆಯ್ತು ನೌಕರಿ

ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಮಾಡಿಕೊಂಡಿವೆ. ಫೆಬ್ರವರಿಯಿಂದ ಏಪ್ರಿಲ್ ಅಂತ್ಯದ ವರೆಗೆ ಜಿಲ್ಲೆಯ ಕಾರವಾರದ ದೇವಬಾಗ, ಮಾಜಾಳಿ, ಅಂಕೋಲಾ (Ankola), ಹೊನ್ನಾವರದ (Honnavar) ಕಡಲತೀರ ಹೀಗೆ ಹಲವು ಪ್ರದೇಶದಲ್ಲಿ ಆಮೆಗಳು (Turtle) ಮೊಟ್ಟೆ ಇಟ್ಟು ತೆರಳುತ್ತವೆ. ಇವುಗಳ ರಕ್ಷಣೆಗ ಮಾಡುತ್ತಿರುವ ಅರಣ್ಯ ಇಲಾಖೆಯಿಂದ ಕಾರವಾರ ಕಡಲ ತೀರದಲ್ಲಿ ಕಳೆದ ಎರಡು ತಿಂಗಳಲ್ಲಿ ೧೧೦ ಆಮೆ ಮೊಟ್ಟೆಗಳ ಗೂಡುಗಳನ್ನು ರಕ್ಷಣೆ ಮಾಡಲಾಗಿದೆ. ಇವುಗಳಲ್ಲಿ ಇದೀಗ ೯ ಗೂಡುಗಳಿಂದ ಮರಿ ಹೊರಕ್ಕೆ ಬಂದಿದ್ದು, ೧೦೨೭ ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದೆ. ಶನಿವಾರ ೧೨೩ ಆಮೆ ಮರಿಗಳು ಸಮುದ್ರ ಸೇರಿದವು.

ಕಡಲಾಮೆಗಳನ್ನು ಸಮುದ್ರಕ್ಕೆ ಬಿಟ್ಟ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Bike accident/ ರೈಲ್ವೆ ಸಿಬ್ಬಂದಿ ಅಪಘಾತದಲ್ಲಿ ಸಾವು