ಭಟ್ಕಳ: ವಿಶ್ವದ ಮೂಲೆಮೂಲೆಗಳಲ್ಲಿರುವ ಕನ್ನಡಿಗರು ಸೇರಿದಂತೆ ೬೦೦೦ ಕವಿಗಳು ಭಾಗವಹಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಕವನ ಸ್ಪರ್ಧೆಯಲ್ಲಿ (poetry competition) ನಾಡಿನ ಹೆಸರಾಂತ ಕವಿ ಶ್ರೀಧರ ಶೇಟ್ ಶಿರಾಲಿ ದ್ವಿತೀಯ ಸ್ಥಾನ ಗಳಿಸಿ ಅಮೋಘ ಸಾಧನೆ ಮಾಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ ಪ್ರತಿಷ್ಠಿತ ಸಪ್ನಾ ಬುಕ್ ಸ್ಟಾಲ್ ಮತ್ತು ಇಂಡಿಯನ್ ಪೊಯೆಟ್ರಿ ಸೊಸೈಟಿಯವರು ‘ಕನ್ನಡ ಕಾವ್ಯೋತ್ಸವ'( ಸಂಚಿಕೆ-೨) ಕವನ ಸ್ಪರ್ಧೆಯನ್ನು (poetry competition) ಆಯೋಜಿಸಿದ್ದರು. ಈ ಸ್ಪರ್ಧೆಗೆ ಕಳುಹಿಸಲ್ಪಟ್ಟ 6000 ಕವನಗಳಲ್ಲಿ ಶ್ರೀಧರ ಶೇಟ್ ಶಿರಾಲಿಯವರ ‘ಬಸ್ ಸ್ಟ್ಯಾಂಡ್ ಮತ್ತು ಅವಳು’ ದ್ವಿತೀಯ ಸ್ಥಾನ ಗಳಿಸಿದೆ. ಈ ಸ್ಪರ್ಧೆಯ ವಿಶೇಷತೆ ಮತ್ತು ಸವಾಲು ಎಂದರೆ ಕವಿಯಾದವನು ಕೇವಲ ಹದಿನೈದು ಸಾಲುಗಳಲ್ಲಿ ತನ್ನ ಭಾವನೆಗಳನ್ನು ಕಾವ್ಯರೂಪದಲ್ಲಿ ಅಭಿವ್ಯಕ್ತಿಪಡಿಸಬೇಕು.

ಇದನ್ನು ಓದಿ: Accident/ ಫೋರ್ಡ್ ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಸ್ಕೋಡಾ ಕಾರು 

ಈಗಾಗಲೇ ನಾಡಿನಾದ್ಯಂತ ತಮ್ಮ ಪ್ರಬುದ್ಧ ಕವನಗಳಿಗಾಗಿ ಶ್ರೀಧರ ಶೇಟ್ ಶಿರಾಲಿಯವರು ಹಲವಾರು ಪ್ರಶಸ್ತಿ ಮತ್ತು ಬಹುಮಾನಗಳನ್ನು ಗಳಿಸಿದ್ದಾರೆ. ಇದೇ ಕವನವು ‘ಕರಾವಳಿ ಮುಂಜಾವು’ ದಿನಪತ್ರಿಕೆ ಏರ್ಪಡಿಸುವ ‘ದೀಪಾವಳಿ ವಿಶೇಷಾಂಕ’ದ ಕವನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಬೆಂಗಳೂರಿನ ಸಂಕ್ರಮಣ ಪ್ರಕಾಶನದವರು ಏರ್ಪಡಿಸುವ ಸಂಕ್ರಮಣ ಕಾವ್ಯ ಸ್ಪರ್ಧೆಯಲ್ಲಿ ಇವರ ‘ನಮ್ಮವರು’ ಮತ್ತು ‘ಹಸಿವು ಸಾಯುವುದಿಲ್ಲ’ ಎಂಬ ಕವನಗಳು ಕ್ರಮವಾಗಿ ಎರಡು ಬಾರಿ ‘ಸಂಕ್ರಮಣ ಕಾವ್ಯ ಪ್ರಶಸ್ತಿ’ಯನ್ನು ಪಡೆದುಕೊಂಡಿವೆ.

ಇದನ್ನು ಓದಿ: unidentified man/ ರೈಲಿನಡಿಗೆ ಬಿದ್ದು ವ್ಯಕ್ತಿ ಸಾವು

ಇವರ ‘ಬೇಲಿಯ ಹೂವು’ಎಂಬ ಪ್ರಸಿದ್ಧ ಮಕ್ಕಳ ಕವನವು ಐಸಿಎಸ್‌ಸಿ ಪಠ್ಯಕ್ರಮದ ಐದನೇ ತರಗತಿಯ ‘ಕನ್ನಡ ಚಂದನ’ ಪಠ್ಯಪುಸ್ತಕದಲ್ಲಿ ಅಳವಡಿಸಲ್ಪಟ್ಟಿದೆ. ಕಾರವಾರ ಆಕಾಶವಾಣಿ ಮತ್ತು ಬೆಂಗಳೂರಿನ ‘ಚಂದನ ವಾಹಿನಿ’ಯಲ್ಲಿ ಇವರ ಕವನಗಳು ಬಿತ್ತರಗೊಂಡಿವೆ. ಭಟ್ಕಳ ತಾಲೂಕು ೯ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾಗಿರುವ ಇವರ ಹಲವಾರು ಕವನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಇದನ್ನು ಓದಿ: Laborer injured/ ಭಟ್ಕಳದಲ್ಲಿ ಬೈಕ್ ಡಿಕ್ಕಿಯಾಗಿ ಕೂಲಿ ಕಾರ್ಮಿಕನಿಗೆ ಗಾಯ

ಭಟ್ಕಳದ (Bhatkal) ಜಾಲಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಅಧ್ಯಾಪಕರಾಗಿರುವ ಇವರ ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ‘ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’ ನೀಡಿ ಕರ್ನಾಟಕ ಸರ್ಕಾರವು ಗೌರವಿಸಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮಾಸ್ಕೇರಿ ಸಾಹಿತ್ಯಾರಾಧನಾ ವೇದಿಕೆ ಮತ್ತು ಸಾಹಿತ್ಯ ಸಂಚಯ ಶಿರಸಿ (Sirsi) ಇವರು ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’ಯನ್ನು ನೀಡಿ ಗೌರವಿಸಿದ್ದಾರೆ. ಇವರು ಏಳಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನು ಕನ್ನಡ ಸರಸ್ವತ ಲೋಕಕ್ಕೆ ನೀಡಿದ್ದಾರೆ.

ಇದನ್ನು ಓದಿ: car collision/ ಅತೀ ವೇಗದ ಕಾರು ಡಿಕ್ಕಿ: ಬೈಕ್ ಸವಾರ ಗಂಭೀರ