ಭಟ್ಕಳ (Bhatkal): ಹರಕೆಯಲ್ಲಿ ವಿವಿಧ ಬಗೆಯನ್ನು ಕಂಡಿರುತ್ತೀರಿ, ಕೇಳಿರುತ್ತೀರಿ. ಆದರೆ, ಪ್ರಮುಖ ಆಕರ್ಷಣೆ ಹಾಗೂ ಅಪರೂಪದ ಹರಕೆ ತಾಲೂಕಿನ ಹೆಬಳೆಯ ಶೇಡಬರಿ (Shedabari) ಜಟಕಾ ಮಹಾಸತಿ ದೇವಿಯ ಜಾತ್ರೆಯಲ್ಲಿ ಪ್ರತಿ ವರ್ಷ ನಡೆಯುತ್ತದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಕ್ತರು ಶೇಡಿ ಮರವನ್ನು ಏರುವ ಹರಕೆ ಈ ಜಾತ್ರೆಯ ವಿಶೇಷವಾಗಿದೆ. ಎರಡು ದಿನಗಳ ಕಾಲ ನಡೆಯುವ ಜಾತ್ರೆ ವಿದ್ಯುಕ್ತವಾಗಿ ಮಕರ ಸಂಕ್ರಮಣದ (makara Sankranti) ಮರುದಿನವಾದ ಬುಧವಾರ ಆರಂಭಗೊಂಡಿದೆ.
ಇದನ್ನೂ ಓದಿ: ‘ಶಿರಾಲಿಯ ಶಕ್ತಿ – ಶ್ರೀ ಹಾದಿ ಮಾಸ್ತಿ’ ಪುಸ್ತಕ ಲೋಕಾರ್ಪಣೆ
ಶೇಡಬರಿ (Shedabari) ಜಾತ್ರಾ ಮಹೋತ್ಸವ ಜಿಲ್ಲೆಯಲ್ಲಿಯೇ ಪ್ರಸಿದ್ಧ ಹಾಗೂ ಅಪರೂಪದ್ದಾಗಿದೆ. ವಿಶೇಷ ರೀತಿಯಲ್ಲಿ ಭಕ್ತರು ಶೇಡಿ ಮರವನ್ನು ಏರಿ ಸಿಂಗಾರವನ್ನು ಎಸೆಯುವುದು ರೂಢಿಯಲ್ಲಿದೆ. ಇನ್ನುಳಿದಂತೆ ಬೇರೆ ರೀತಿಯ ಹರಕೆ, ಕಾಣಿಕೆ ಹಾಗೂ ಪೂಜೆಗಳಿಂದಲೇ ಪ್ರಸಿದ್ಧತೆಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ: Readers letter/ ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ತಾತ್ಸಾರವೇಕೆ?
ಜಾತ್ರೆಗೆ ಬರುವ ಸಹಸ್ರಾರು ಭಕ್ತರು ತಮ್ಮ ಕಷ್ಟ ಪರಿಹಾರಕ್ಕಾಗಿ ಹರಕೆ, ಕಾಣಿಕೆ ಹಾಗೂ ಪೂಜೆಗಳನ್ನು ಸಲ್ಲಿಸಿ ತಮ್ಮ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತಾರೆ. ಇಲ್ಲಿನ ಹರಕೆ ಹೊತ್ತವರಿಗೆ ಅವರ ಬೇಡಿಕೆ ಈಡೇರಿರುವ ಸಾಕಷ್ಟು ಉದಾಹರಣೆಗಳಿವೆ. ಸಂತಾನ ಭಾಗ್ಯ, ಸಿಡುಬು ಸೇರಿದಂತೆ ಸಾಕಷ್ಟು ಕಾಯಿಲೆಗೆ ಇಲ್ಲಿನ ದೇವರ ಶಕ್ತಿಯಿಂದ ಕಡಿಮೆಯಾಗಿ ಸಂತಸದಿಂದ ಭಕ್ತರು ಜೀವನ ನಡೆಸುತ್ತಾ ಸೇವೆಯನ್ನು ಮುಂದುವರೆಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ: Under Pass/ ಗ್ರಾಮಸ್ಥರಿಂದ ಸಂಸದ ಕಾಗೇರಿ ತರಾಟೆಗೆ
ಜಾತ್ರೆಯ ದಿನದಂದು ತಾಲೂಕಿನಿಂದಷ್ಟೇ ಅಲ್ಲದೇ ಹೆಚ್ಚು ಕಡಿಮೆ ರಾಜ್ಯದ ನಾನಾ ಮೂಲೆಯಿಂದ ಭಕ್ತರು ಆಗಮಿಸಿ ಇಲ್ಲಿ ಹರಕೆ, ಕಾಣಿಕೆಗಳನ್ನು ಸಲ್ಲಿಸುವದುಂಟು. ಶೇಡಿಮರ ಏರುವ ಹರಕೆ ಹೊತ್ತವರು ದೇವಸ್ಥಾನಕ್ಕೆ ಬಂದು ದೇವರಿಗೆ ಪೂಜೆಯನ್ನು ಸಲ್ಲಿಸಿ ದೇವಸ್ಥಾನದ ಎದುರಿನಲ್ಲಿ ಶೃಂಗರಿಸಿದ್ದ ಶೇಡಿಮರದಲ್ಲಿ ಕುಳಿತು ಮೂರು ಸುತ್ತು ತಿರುಗಿದ ಬಳಿಕ ಅವರು ತಾವು ತಂದಿದ್ದ ಸಿಂಗಾರ ಹೂವು, ಬಾಳೆ ಹಣ್ಣನ್ನು ಕೆಳಗಡೆಯಿರುವ ಭಕ್ತರ ಮೇಲೆ ಎಸೆಯುವುದು ವಾಡಿಕೆ.
ವಿಡಿಯೋ ಸಹಿತ ಇದನ್ನೂ ಓದಿ: Mari Jathre/ ಮನೆಯ ಹಬ್ಬವಾಗಿಸುವ ಮಾರಿ ಜಾತ್ರೆ
ಇದು ದೇವರ ಪ್ರಸಾದವೆಂದು ಭಕ್ತರು ಭಕ್ತಿಯಿಂದ ಸ್ವೀಕರಿಸುತ್ತಾರೆ. ತಮ್ಮ ಕಷ್ಟ ಕಾಲದಲ್ಲಿ ಶೇಡಬರಿ ಮಹಾಸತಿ ದೇವಿಯ ಬಳಿ ಶೇಡಿಮರ ಏರುವುದಾಗಿ ಹೇಳಿಕೆ ಮಾಡಿಕೊಂಡರೆ, ಆ ಕಷ್ಟಗಳು ಪರಿಹಾರವಾಗಿ ಸುಖ, ಸಮೃದ್ಧಿ ಲಭಿಸುತ್ತದೆ ಎಂಬ ನಂಬಿಕೆ ಮಹಾಸತಿ ದೇವಿಯ ಭಕ್ತರಲ್ಲಿ ಇದೆ. ಆ ಹರಕೆಯನ್ನು ಜಾತ್ರೆಯ ಸಂದರ್ಭದಲ್ಲಿ ಸಲ್ಲಿಸುವುದು ಈ ಹಿಂದಿನಿಂದಲೂ ನಡೆದುಕೊಂಡು ಬಂದ ವಾಡಿಕೆ.
ವಿಡಿಯೋ ಸಹಿತ ಇದನ್ನೂ ಓದಿ: Mari Jathre/ ಅಳಿವೆಕೋಡಿಯಲ್ಲಿ ಮಾರಿ ಜಾತ್ರೆ ವೈಭವ
ಅದರಂತೆ ಬುಧವಾರದಂದು ಬೆಳಿಗ್ಗೆಯಿಂದಲೇ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರು ಮಹಾಸತಿ ದೇವಸ್ಥಾನದ ಎದುರು ಅಲಂಕೃತಗೊಳಿಸಿ, ಸಿದ್ಧಪಡಿಸಿದ್ದ ಶೇಡಿ ಮರವನ್ನು ಸಂಜೆ ವೇಳೆಗೆ ಏರಿ ಮೂರು ಸುತ್ತು ತಿರುಗಿ, ತಾವು ತಂದಿದ್ದ ಹೂವು, ಹಣ್ಣನ್ನು ಕೆಳಗೆ ನಿಂತಿದ್ದ ಭಕ್ತರ ಮೇಲೆ ಎಸೆದರು. ಅದನ್ನು ಭಕ್ತರು ಪ್ರಸಾದವೆಂದು ಸ್ವೀಕರಿಸಿದರು. ಈ ಹರಕೆ ದೃಶ್ಯ ನೋಡಲು ನೂರಾರು ಜನರು ನೆರೆದಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ: Kannada cinema/ ಭಟ್ಕಳ, ಮುರುಡೇಶ್ವರದಲ್ಲಿ ಕೋಣ ಚಿತ್ರೀಕರಣ
ದೇವಸ್ಥಾನದ ಆಡಳಿತ ಮಂಡಳಿಯಿಂದ ಎರಡೂ ದಿನಗಳ ಕಾಲ ಭಕ್ತರಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಾತ್ರೆಯ ಅಂಗವಾಗಿ ಭಕ್ತರು ಶೇಡಬರಿ ಜಟಕಾ ಮಹಾಸತಿ ದೇವಿಗೆ ಹಾಗೂ ಪರಿವಾರ ದೇವರಿಗೆ ಸಿಂಗಾರದ ಹೂವಿನ ವಿಶೇಷಪೂಜೆ, ಕಾಣಿಕೆಗಳನ್ನು ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿದರು. ವರ್ಷವೂ ಸಹಸ್ರಾರು ಭಕ್ತರು ಈ ಜಾತ್ರೆಗೆ ಸಾಕ್ಷಿಯಾಗುತ್ತಿದ್ದು, ಈ ವರ್ಷ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಊರಿನ, ಪರ ಊರಿನ ಹಾಗೂ ಅಕ್ಕಪಕ್ಕದ ತಾಲುಕಿನಿಂದ ಜನರು ಬಂದು ಜಾತ್ರೆಯ ಕಳೆಯನ್ನು ಇನ್ನಷ್ಟು ಹೆಚ್ಚಿಸಿದರು.
ಇದನ್ನೂ ಓದಿ: ಮುರುಡೇಶ್ವರಕ್ಕೆ ಬಂದಿದ್ದ ಹಿರಿಯ ಪತ್ರಕರ್ತ ನಿಧನ
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಕಾರ್ಯದರ್ಶಿ ಈರಪ್ಪ ನಾಯ್ಕ ಹಾಗೂ ಎಲ್ಲಾ ಸದಸ್ಯರು ಜಾತ್ರೆಗೆ ಬಂದ ಭಕ್ತರ ಪೂಜೆಗೆ, ಹರಕೆ ಸಲ್ಲಿಸುವುದಕ್ಕೆ ಸಹಕರಿಸಿದರು. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನೂಕೂಲವಾಗುವಂತೆ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಜಾತ್ರಾ ಪ್ರಯುಕ್ತ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್, ಇನ್ಸ್ಟಾಗ್ರಾಂ ಮತ್ತು ಫೇಸ್ಬುಕ್ನಲ್ಲಿ ವೀಕ್ಷಿಸಬಹುದು.