ಅಂಕೋಲಾ (Ankola):  ತಾಲೂಕಿನ ಶಿರೂರು ಗುಡ್ಡ ಕುಸಿತ (Shiruru landslide) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ (Kerala) ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ (Driver Arjun) ಅವರ ಮೃತದೇಹ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ ಜಿಲ್ಲೆಯಾದ್ಯಂತ (uttara kannada) ಭಾರೀ ಮಳೆಯಿಂದ ಅಂಕೋಲಾ ತಾಲೂಕಿನ ಶಿರೂರು ಗ್ರಾಮದಲ್ಲಿ ಗುಡ್ಡ ಕುಸಿತ ಆಗಿತ್ತು. ಈ ಸಂದರ್ಭದಲ್ಲಿ ಚಹಾ ಕುಡಿಯಲು ಲಾರಿಯೊಂದಿಗೆ ನಿಂತಿದ್ದ ಕೇರಳದ ಅರ್ಜುನ್ ಸಹಿತ ಹಲವರು ನದಿ ನೀರು ಪಾಲಾಗಿದ್ದರು. ಈ ಸಂದರ್ಭದಲ್ಲಿ ಅರ್ಜುನ್‌ ಹುಡುಕಾಟಕ್ಕಾಗಿ ಕೇರಳ ಸರಕಾರ ಮುತುವರ್ಜಿ ವಹಿಸಿತ್ತು. ಕರ್ನಾಟಕದ (karnataka) ಮೇಲೆ ತೀವ್ರ ಒತ್ತಡ ಹೇರಿತ್ತು. ಈ ಪ್ರಕರಣ ಇಡೀ ದೇಶದಲ್ಲೇ ಗಮನ ಸೆಳೆದಿತ್ತು. ಕೇರಳದ ಮಾಧ್ಯಮಗಳು ಸ್ಥಳಕ್ಕೆ ಆಗಮಿಸಿ ವರದಿ ಮಾಡಿದ್ದವು.

ಲಾರಿ ಮೇಲೆತ್ತುವ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ : Karwar Case/ ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ