ಶಿರಸಿ (Sirsi): ವಿಜಯಪುರದ (Vijayapura) ಜಿಲ್ಲಾ ಕಾರಾಗೃಹದಲ್ಲಿ ಅರ್ಥಪೂರ್ಣ ಶ್ರೀ ಭಗವದ್ಗೀತಾ (Bhagavad Gita) ಅಭಿಯಾನ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸುಮಾರು 100 ಕ್ಕೂ ಹೆಚ್ಚು ಜೈಲಿನ ನಿವಾಸಿಗಳಿಗೆ ಭಗವದ್ಗೀತೆಯ ಒಂಭತ್ತನೆಯ ಅಧ್ಯಾಯದ ಶ್ಲೋಕಗಳನ್ನು ಒಂದು ವಾರಗಳ ಕಾಲ ಹೇಳಿಕೊಡಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಗವದ್ಗೀತಾ (Bhagavad Gita) ಅಭಿಯಾನದ ನೇತೃತ್ವ ವಹಿಸಿರುವ ಸ್ವರ್ಣವಲ್ಲೀ (Swarnavalli) ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಕಾರಾಗೃಹಕ್ಕೆ ಭೇಟಿ ನೀಡಿ ಆಶೀರ್ವಚನ ನುಡಿದರು. ಅಲ್ಲಿನ ಕೈದಿಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸಿದರು. ನಂತರ ಆಶೀರ್ವಚನ ನೀಡಿದ ಶ್ರೀಗಳು, ಸಮಾಜದ ಯಾರೂ ಒಬ್ಬರನ್ನು ಬಿಡದೆ ಎಲ್ಲರಿಗೂ ಭಗವದ್ಗೀತೆ ಮುಟ್ಟಬೇಕು. ಭಗವದ್ಗೀತೆಯು ಕೊಟ್ಟ ಒಳ್ಳೆಯ ಮೌಲ್ಯಗಳು ಪ್ರತಿಯೊಬ್ಬರನ್ನೂ ತಲುಪಬೇಕು ಎಂಬ ಪರಮ ಉದ್ದೇಶದಿಂದ ಭಗವದ್ಗೀತಾ ಅಭಿಯಾನವು ಜೈಲಿನಲ್ಲೂ ನೆರವೇರುವ ಹಾಗೆ ಆಯಿತು ಎಂದರು. ಈ ವೇಳೆ ಅಭಿಯಾನದ ಪ್ರಮುಖರು, ಅಧಿಕಾರಿಗಳು ಇದ್ದರು.
ಇದನ್ನೂ ಓದಿ : ಕಾರು ಅಪಘಾತಕ್ಕೀಡಾಗಿ ಶಿಕ್ಷಕ ಸಾವು