ಭಟ್ಕಳ: ನಿಚ್ಚಲಮಕ್ಕಿಯ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ೯ನೇ ವರ್ಷದ ಶ್ರೀ ದೇವರ ಪುನರ್ ಪ್ರತಿಷ್ಠಾಪನೆ ವರ್ಧಂತಿ ಮಹೋತ್ಸವ, ಶ್ರೀನಿವಾಸ ಕಲ್ಯಾಣೋತ್ಸವ (Shrinivasa Kalyanaotsav) ಹಾಗೂ ಪಾಲಕಿ ಮಹೋತ್ಸವವನ್ನು ಜ ೨೨ರಿಂದ ೨೬ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ದೇವಸ್ಥಾನ ಆಡಳಿತ ಸಮಿತಿಯ ಅಧ್ಯಕ್ಷ ಅರುಣ ನಾಯ್ಕ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಗರದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜ ೨೨ರಂದು ವಿಶ್ವಕ್ಸೇನಾರಾಧನೆ, ಮಹಾಸಂಕಲ್ಪ, ಪುಣ್ಯಹವಾಚನ, ವಾಸ್ತುಪೂಜೆ ಹಾಗೂ ವಾಸ್ತುಬಲಿ ಕಾರ್ಯಕ್ರಮಗಳು ನಡೆಯಲಿವೆ. ಜ ೨೪ರಂದು ಬೆಳಿಗ್ಗೆ ೮.೩೦ಕ್ಕೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ (Shrinivasa Kalyanaotsav) ಜರುಗಲಿದ್ದು, ಅದೇ ದಿನ ಸಂಜೆ ೭ ಗಂಟೆಗೆ ಪದ್ಮಾವತಿ ಅಮ್ಮನವರ ಪಲ್ಲಕ್ಕಿ ಆಗಮನ ನಡೆಯಲಿದೆ ಎಂದರು.
ಇದನ್ನು ಓದಿ: bike collision/ ಬೈಕುಗಳ ಡಿಕ್ಕಿಯಾಗಿ ಒಬ್ಬ ಸವಾರ ಗಂಭೀರ
ಜ ೨೫ರಂದು ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠಾಧೀಶರಾದ ಪರಮಪೂಜ್ಯ ಮಹಾಮಂಡಲೇಶ್ವರ ೧೦೦೮ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಮಹಾಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ಶ್ರೀ ತಿರುಮಲ ವೆಂಕಟರಮಣ ದೇವರ ಪಾಲಕಿ ಮಹೋತ್ಸವವು ಭಕ್ತರ ಸಹಕಾರದೊಂದಿಗೆ ಭವ್ಯವಾಗಿ ನಡೆಯಲಿದೆ ಎಂದು ಅರುಣ ನಾಯ್ಕ ಹೇಳಿದರು.
ಇದನ್ನು ಓದಿ: Police Raid/ ೫ ಸ್ಕೂಟಿ ವಶಕ್ಕೆ ಪಡೆದ ಮುರುಡೇಶ್ವರ ಪೊಲೀಸರು
ಗುರುಮಠದ ಗೌರವಾಧ್ಯಕ್ಷ ಕೃಷ್ಣಾ ನಾಯ್ಕ ಮಾತನಾಡಿ, ಶ್ರೀನಿವಾಸ ಕಲ್ಯಾಣೋತ್ಸವದ ಮಹತ್ವವನ್ನು ವಿವರಿಸಿದರು. ಈ ಸಂದರ್ಭದಲ್ಲಿ ವಿಠ್ಠಲ ನಾಯ್ಕ, ಮಹೇಶ ನಾಯ್ಕ, ಪುಂಡಲೀಕ ನಾಯ್ಕ, ಪ್ರಕಾಶ ನಾಯ್ಕ (ತೆಂಗಿನಗುಂಡಿ), ಮಹಾಬಲೇಶ್ವರ ನಾಯ್ಕ, ಶಿವರಾಮ ನಾಯ್ಕ, ಉಪಾಧ್ಯಕ್ಷ ಎಂ ಕೆ ನಾಯ್ಕ ಹಾಗೂ ಕಾರ್ಯದರ್ಶಿ ಡಿ ಎಲ್ ನಾಯ್ಕ ಉಪಸ್ಥಿತರಿದ್ದರು.
ಇದನ್ನು ಓದಿ: FIR filed/ ಕಾರು ಚಾಲಕನ ಅಮಿತ ವೇಗಕ್ಕೆ ಬಿತ್ತು ಎಫ್ ಐ ಆರ್



