ಭಟ್ಕಳ: ಬೈಕುಗಳ ಡಿಕ್ಕಿಯಾಗಿ (bike collision) ಒಬ್ಬ ಸವಾರ ಗಾಯಗೊಂಡ ಘಟನೆ ಮುರುಡೇಶ್ವರ (Murudeshwar) ಪೊಲೀಸ್ ಠಾಣೆ ವ್ಯಾಪ್ತಿಯ ಬಸ್ತಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಕಾಯ್ಕಿಣಿ ಗ್ರಾಮದ ನಾಗರಾಜ ಸುಬ್ರಾಯ ಶೆಟ್ಟಿ (೫೩) ಗಾಯಗೊಂಡವರು. ಇನ್ನೊಂದು ಬೈಕ್ ಸವಾರ ಕಾಯ್ಕಿಣಿ ಗ್ರಾಮದ ದೇವಿದಾಸ ತಂದೆ ಮಂಜಯ್ಯ ಶೆಟ್ಟಿ ವಿರುದ್ಧ ದೂರು ದಾಖಲಾಗಿದೆ.
ಇದನ್ನು ಓದಿ: Police Raid/ ೫ ಸ್ಕೂಟಿ ವಶಕ್ಕೆ ಪಡೆದ ಮುರುಡೇಶ್ವರ ಪೊಲೀಸರು
ದಿನಾಂಕ: ೦೮-೦೭-೨೦೨೫ರಂದು ಮಧ್ಯಾಹ್ನ ೨:೩೦ ಗಂಟೆಯ ಸಮಯಕ್ಕೆ ನಾಗರಾಜ ಶೆಟ್ಟಿ ತಮ್ಮ ಅಂಗಡಿ ಕೆಲಸ ಮುಗಿಸಿಕೊಂಡು ಮನೆಗೆ ಊಟಕ್ಕೆ ತಮ್ಮ ಬೈಕಿನಲ್ಲಿ ಹೊರಟಿದ್ದರು. ಮುರ್ಡೇಶ್ವರದ ರಾಷ್ಟ್ರೀಯ ಹೆದ್ದಾರಿ-೬೬ರ ಮುಖಾಂತರ ಬಸ್ತಿ ಕಡೆಯಿಂದ ಮುರ್ಡೇಶ್ವರದ ಕಡೆಗೆ ೨೦೦ ಮೀಟರ್ ಮುಂದೆ ಬರುತ್ತಿರುವಾಗ ಅಪಘಾತ ನಡೆದಿದೆ. ಆಪಾದಿತನಾದ ದೇವಿದಾಸ ಶೆಟ್ಟಿ ತಮ್ಮ ಮೊಟಾರ ಸೈಕಲನ್ನು ರಾಷ್ಟ್ರೀಯ ಹೆದ್ದಾರಿ-೬೬ರ ಮುರ್ಡೇಶ್ವರ ಕಡೆಯಿಂದ ಬಸ್ತಿ ಕಡೆಗೆ ಅತೀ ವೇಗ ಹಾಗೂ ಅಜಾಗೂರುಕತೆಯಿಂದ ಚಲಾಯಿಸಿಕೊಂಡು ಹೋಗಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ (bike collision). ರಸ್ತೆಯ ಮೇಲೆ ಬಿದ್ದ ನಾಗರಾಜ ಶೆಟ್ಟಿ ಅವರ ಸೊಂಟಕ್ಕೆ ಹಾಗೂ ಕೈ ಕಾಲುಗಳಿಗೆ ಭಾರಿ ಗಾಯ ಆಗಿದೆ. ಈ ಕುರಿತು ನಾಗರಾಜ ಶೆಟ್ಟಿ ಅವರ ಪತ್ನಿ ಪೂರ್ಣಿಮಾ ದಾಖಲಿಸಿದ ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ: FIR filed/ ಕಾರು ಚಾಲಕನ ಅಮಿತ ವೇಗಕ್ಕೆ ಬಿತ್ತು ಎಫ್ ಐ ಆರ್



