ಭಟ್ಕಳ(Bhatkal) : ಸಾಮಾಜಿಕ ಪರಿಶೋಧನೆ (Social Exploration) ಕೇಂದ್ರ ಸರಕಾರದ ಒಂದು ವಿಭಿನ್ನ ಕಲ್ಪನೆಯಾಗಿದೆ. ಉಳಿದೆಲ್ಲ ಪರಿಶೋಧನೆಗಿಂತ ಹೆಚ್ಚಿನ ಸಕಾರಾತ್ಮಕ ಫಲಿತಾಂಶ ಸಾಮಾಜಿಕ ಪರಿಶೋಧನೆಯಿಂದ ಸಾಧ್ಯ. ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಸಾಧಿಸುವಲ್ಲಿ ಇದು ಅತ್ಯಂತ ಸಹಕಾರಿ ಎಂದು ತಾಲೂಕು ಪಂಚಾಯತಿಯ ಸಾಮಾಜಿಕ ಪರಿಶೋಧನೆಯ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ನುಡಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ತಾಲೂಕಿನ ಬೆಳಕೆ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಪ್ರಧಾನ ಮಂತ್ರಿ ಪೋಷಣ ಶಕ್ತಿ ನಿರ್ಮಾಣ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಸಾಮಾಜಿಕ ಪರಿಶೋಧನಾ (Social Exploration) ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಸರಕಾರ ಉಳಿದ ಇಲಾಖೆಗಳಲ್ಲಿ ಮಾತ್ರ ಇದ್ದಂತ ಸಾಮಾಜಿಕ ಪರಿಶೋಧನೆಯ ಕಲ್ಪನೆಯನ್ನು ಶಿಕ್ಷಣ ಇಲಾಖೆಗೂ ಮುಂದುವರಿಸಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆ, ಗುಣಮಟ್ಟದ ಆಹಾರ ಸಿಗುವಲ್ಲಿ ಮಹತ್ವದ ಬದಲಾವಣೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇದನ್ನೂ ಓದಿ :  ದೇಶಕ್ಕೆ ದೈವಾನುಕೂಲ ಇಲ್ಲ : ರಾಘವೇಶ್ವರ ಶ್ರೀ

ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯದ ಆದೇಶದಂತೆ ಆಗಸ್ ೧೭ರಿಂದ ಬೆಳಕೆ ಪ್ರೌಢಶಾಲೆಯಲ್ಲಿ ಸಮಗ್ರ ಶಿಕ್ಷಣ ಹಾಗೂ ಪ್ರಧಾನ ಮಂತ್ರಿ ಪೋಷಣ ಶಕ್ತಿ ಮಧ್ಯಾಹ್ನದ ಬಿಸಿಊಟದ ಸಾಮಾಜಿಕ ಪರಿಶೋಧನೆ ನಡೆಸಿದ ವರದಿಯನ್ನು ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಎಳೆಎಳೆಯಾಗಿ ಬಿಡಿಸಿ ಹೇಳಿದರು. ಮಕ್ಕಳ ಪಾಠ, ಶೌಚಾಲಯ, ಗ್ರಂಥಾಲಯ, ಪ್ರಯೋಗಾಲಯ, ದಾಖಲಾತಿ ನಿರ್ವಹಣೆ ,ಬಿಸಿಊಟದ ಅಡುಗೆ ಕೋಣೆಯ ಪರಿಶೀಲನೆ, ಊಟ ತಯಾರಿಕಾ ಹಂತ, ಬಡಿಸುವಲ್ಲಿನ ಸ್ವಚ್ಛತೆ, ಊಟದ ರುಚಿ, ಮಕ್ಕಳ ಹಾಗೂ ಪಾಲಕರ ಅಭಿಪ್ರಾಯ ಸಂಗ್ರಹಣೆ, ಪುರ್ವಬಾವಿ ಸಭೆ ಈ ಎಲ್ಲ ವಿಷಯಗಳ ಕುರಿತು ಕಂಡುಕೊಂಡ ವರದಿಗಳನ್ನು ಸಭೆಯಲ್ಲಿ ಮಂಡಿಸಿದರು. ಎಲ್ಲಿ ಶಿಕ್ಷಕರು, ಪಾಲಕರು, ಮಕ್ಕಳು ಮತ್ತು ಅಡುಗೆಯವರ ಪರಸ್ಪರ ಹೊಂದಾಣಿಕೆ ಹಾಗೂ ವಿಶ್ವಾಸ ಇರುತ್ತದೆಯೋ ಅಲ್ಲಿ ಯಾವುದೇ ಲೋಪ ಕಂಡುಬರುವುದಿಲ್ಲ. ಈ ಸಕಾರಾತ್ಮಕ ಬದಲಾವಣೆ ಎಲ್ಲ ಶಾಲೆಗಳಲ್ಲೂ ಮುಂದಿನ ದಿನಗಳಲ್ಲಿ ಕಾಣುವಂತಾಗಬೇಕು ಎಂದರು.

ಇದನ್ನೂ ಓದಿ : ಭಾವೈಕ್ಯತೆಯ ರಕ್ಷಾ ಬಂಧನ ಆಚರಣೆ

ನೋಡಲ್‌ ಅಧಿಕಾರಿಯಾಗಿ ಭಾಗವಹಿಸಿದ್ದ ಗ್ರಾಮೀಣ ಉದ್ಯೋಗ ಸಹಾಯಕ ನಿರ್ದೇಶಕ ಉದಯ ಬೋರ್ಕರ್ ಮಾತನಾಡಿ ಸಾಮಾಜಿಕ ಪರಿಶೋಧನೆ ತಳಹಂತದಲ್ಲಿ ಸಮುದಾಯದೊಂದಿಗೆ ನಡೆಯುವ ಪ್ರಕ್ರಿಯೆ ಆದ ಕಾರಣ ಏನೇ ಲೋಪಗಳು ಕಂಡುಬಂದಲ್ಲಿ ಅದು ಬೆಳಕಿಗೆ ಬರುವಲ್ಲಿ ಯಾವುದೇ ಸಂದೇಹವಿಲ್ಲ ಜೊತೆಗೆ ಶಾಲೆಯ ಸಾಧನೆಗಳು ಒಳ್ಳೆಯ ಕಾರ್ಯಗಳು ಇದ್ದಲ್ಲಿ ಅವುಗಳೂ ಕೂಡ ರಾಜ್ಯಮಟ್ಟದಲ್ಲಿ ಸರ್ಕಾರದ ಗಮನಕ್ಮೆ ತರುವಲ್ಲಿಯೂ ಮುಖ್ಯ ಪಾತ್ರ ವಹಿಸುವುದಾಗಿ ಹೇಳಿದರು.

ಇದನ್ನೂ ಓದಿ :  ವಡೇರಮಠದಲ್ಲಿ ವರಮಹಾಲಕ್ಷ್ಮಿ ವ್ರತಾಚರಣೆ

ನಂತರ ಪಾಲಕರಿಗೆ ಅವರ ಅಭಿಪ್ರಾಯಗಳಿಗೆ ಸಲಹೆ ಸೂಚನೆಗಳಿಗೆ ಮುಕ್ತ ಅವಕಾಶ ನೀಡಲಾಯಿತು. ಮುಖ್ಯ ಶಿಕ್ಷಕಿ ಶಾಲಿನಿ ನಾಯಕ ಮೊದಲಿಗೆ ಸ್ವಾಗತಿಸಿ, ಶಾಲಾ ಮಕ್ಕಳ ಸಾಧನೆಗಳ ಪರಿಚಯ ಮಾಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಈಶ್ವರ ನಾಯ್ಕ, ಶಿಕ್ಷಕ ಮಹೇಶ್ವರ ನಾಯ್ಕ, ಕೇಶವ ಗೌಡ ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ ನಾಯ್ಕ, ಚೈತ್ರಾ ನಾಯ್ಕ, ಯಶೋಧಾ ನಾಯ್ಕ, ಸಿಂಧು ನಾಯ್ಕ ಹಾಜರಿದ್ದರು. ಸಭೆಯಲ್ಲಿ ಶಿಕ್ಷಕರು ಹಾಗೂ ೧೦೦ಕ್ಕೂ ಹೆಚ್ಚಿನ ಪಾಲಕರು ಅಡುಗೆ ತಯಾರಿಕೆ ಸಿಬ್ಬಂದಿ ಉಪಸ್ಥಿತರಿದ್ದರು.