ಕಾರವಾರ (Karwar): ಮಹಾಶಿವರಾತ್ರಿ (Mahashivratri) ಪ್ರಯುಕ್ತ ವಾ.ಕ.ರ.ಸಾ. ಸಂಸ್ಥೆ (NWKRTC) ಹೆಚ್ಚುವರಿ ವಿಶೇಷ ಸಾರಿಗೆ (special buses) ವ್ಯವಸ್ಥೆ ಮಾಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ಹುಬ್ಬಳ್ಳಿ (Hubli), ಧಾರವಾಡ(Dharwad), ಗದಗ(Gadag), ಬೆಳಗಾವಿ(belagavi), ಉತ್ತರ ಕನ್ನಡ(Uttara Kannada), ಹಾವೇರಿ(Haveri), ಚಿಕ್ಕೋಡಿ(chikodi) ಮತ್ತು ಬಾಗಲಕೋಟೆ(Bagalkot) ವಿಭಾಗಗಳಿಂದ ಸುಮಾರು ೧೬೦ ಹೆಚ್ಚುವರಿ ವಿಶೇಷ ಸಾರಿಗೆಗಳನ್ನು ಕಾರ್ಯಾಚರಣೆ ಮಾಡಲಾಗುತ್ತಿದೆ.

ಇದನ್ನು ಓದಿ : Epilepsy/ ಮೂರ್ಛೆ ಬಂದಾಗ ಬೀಗದ ಕೈ ಇರಿಸಬೇಡಿ, ಈರುಳ್ಳಿ ಕೊಡಬೇಡಿ

ಫೆ.೨೨ರ ಶನಿವಾರ ಮತ್ತು ೨೩ರ ಭಾನುವಾರ ವಾರಾಂತ್ಯ ದಿನವಾಗಿದೆ. ಫೆ.೨೬ರಂದು ಮಹಾಶಿವರಾತ್ರಿ ಹಬ್ಬವಿರುವುದರಿಂದ ಬೆಂಗಳೂರು ಮತ್ತು ಇತರೆ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ತಮ್ಮ ಊರುಗಳಿಗೆ ತೆರಳಲು ಹೆಚ್ಚುವರಿ ಸಾರಿಗೆಗಳನ್ನು (special buses) ಕಾರ್ಯಾಚರಣೆ ಮಾಡಲಾಗುತ್ತಿದೆ.

ಬೆಂಗಳೂರಿನಿಂದ (Bengaluru) ರಾಜ್ಯ/ಅಂತರರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಫೆ.೨೧ರ ಸಂಜೆ ಹಾಗೂ ಫೆ.೨೨, ೨೩ರಂದು ಹೆಚ್ಚುವರಿ ವಿಶೇಷ ಸಾರಿಗೆ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.