ಬೆಂಗಳೂರು (Bengaluru) : ಚಂದ್ರಮಾನ ಯುಗಾದಿ (Ugadi) ಮತ್ತು ರಂಜಾನ್ (Ramadan) ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ನೈಋತ್ಯ ರೈಲ್ವೆ (SWR) ಬೆಂಗಳೂರು (Bangalore) ಮೂಲಕ ಮೈಸೂರು (Mysuru) ಮತ್ತು ಕಾರವಾರ (Karwar) ನಡುವೆ ವಿಶೇಷ ರೈಲಿನ (Special Train) ರೌಂಡ್ ಟ್ರಿಪ್ ನಿರ್ವಹಿಸಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನೈಋತ್ಯ ಮತ್ತು ಕೊಂಕಣ ರೈಲ್ವೆಯ (Konkan Railway) ಪ್ರಕಟಣೆಗಳ ಪ್ರಕಾರ, ಮೈಸೂರು-ಕಾರವಾರ ಎಕ್ಸಪ್ರೆಸ್‌ ವಿಶೇಷ ರೈಲು ಸಂಖ್ಯೆ ೦೬೨೦೩ ಮಾರ್ಚ್ ೨೮ರಂದು ರಾತ್ರಿ ೯.೩೫ಕ್ಕೆ ಮೈಸೂರಿನಿಂದ ಹೊರಟು ಮರುದಿನ ಸಂಜೆ ೪.೧೫ಕ್ಕೆ ಕಾರವಾರ ತಲುಪುತ್ತದೆ. ಹಿಂದಿರುಗುವ ದಿಕ್ಕಿನಲ್ಲಿ,  ಕಾರವಾರ – ಮೈಸೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಸಂಖ್ಯೆ ೦೬೨೦೪ ಮಾರ್ಚ್ ೨೯ರಂದು ರಾತ್ರಿ ೧೧.೩೦ಕ್ಕೆ ಕಾರವಾರದಿಂದ ಹೊರಟು ಮರುದಿನ ಸಂಜೆ ೪.೪೦ಕ್ಕೆ ಮೈಸೂರಿಗೆ (Mysore) ಆಗಮಿಸುತ್ತದೆ.

ಇದನ್ನೂ ಓದಿ : TV9 Expo/ ಟಿವಿ9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ!

ಮಾರ್ಗದಲ್ಲಿ, ರೈಲು ಎರಡೂ ದಿಕ್ಕುಗಳಲ್ಲಿ ಈ ಕೆಳಗಿನ ನಿಲ್ದಾಣಗಳಲ್ಲಿ ನಿಲ್ಲಲಿವೆ: ಮಂಡ್ಯ (Mandya), ಕೆಎಸ್ಆರ್ ಬೆಂಗಳೂರು (KSR Bengaluru), ಯಶವಂತಪುರ (Yeshwanthpur), ಕುಣಿಗಲ್, ಹಾಸನ (Hassan), ಸಕಲೇಶಪುರ (Sakaleshapura), ಸುಬ್ರಹ್ಮಣ್ಯ ರಸ್ತೆ (Subramanya Road), ಕಬಕ ಪುತ್ತೂರು, ಬಂಟ್ವಾಳ, ಸುರತ್ಕಲ್ (Surathkal), ಮೂಲ್ಕಿ, ಉಡುಪಿ (Udupi), ಬಾರ್ಕೂರು, ಕುಂದಾಪುರ (Kundapura), ಬೈಂದೂರು (Byndoor), ಭಟ್ಕಳ (Bhatkal), ಮುರ್ಡೇಶ್ವರ (Murudeshwar), ಹೊನ್ನಾವರ (Honnavar), ಕುಮಟಾ (Kumta) ಮತ್ತು ಗೋಕರ್ಣ ರಸ್ತೆ (Gokarna Road).

ಇದನ್ನೂ ಓದಿ : Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ

ಈ ವಿಶೇಷ ರೈಲು (Special Train) ೨೧ ಐಸಿಎಫ್ ಕೋಚ್‌ಗಳನ್ನು ಹೊಂದಿದ್ದು, ಒಂದು ಎಸಿ-೨ ಟೈರ್ ಕಮ್ ಎಸಿ ೩-ಟೈರ್, ಮೂರು ಎಸಿ ೩-ಟೈರ್, ೧೩ ಸ್ಲೀಪರ್ ಕ್ಲಾಸ್, ಎರಡು ಜನರಲ್ ಸೆಕೆಂಡ್ ಕ್ಲಾಸ್ ಮತ್ತು ೨ ಲಗೇಜ್-ಕಮ್-ಬ್ರೇಕ್ ವ್ಯಾನ್ ಕೋಚ್‌ಗಳನ್ನು ಹೊಂದಿರುತ್ತದೆ.

ಇದನ್ನೂ ಓದಿ : BEL staffer arrested/ ಕಾರವಾರದ ಇಬ್ಬರ ಬಂಧನ ನಂತರ ಮತ್ತೊಬ್ಬ ಸೆರೆ; ಪ್ರಕರಣದ ಇಂಚಿಂಚೂ ಮಾಹಿತಿ ಇಲ್ಲಿದೆ