ಭಟ್ಕಳ (Bhatkal) : ಮೋಟಾರ್‌ ಸೈಕಲ್‌ ಡಿಕ್ಕಿಯಾಗಿ ಸ್ಕೂಟಿ ಸವಾರ ಶಿಕ್ಷಕ ಗಾಯಗೊಂಡ (Teacher injured) ಘಟನೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ಶಹರದ ಗಜಾನನ ಸ್ಟ್ರೀಟ್‌ ಹೊಂಡದಕೇರಿ ನಿವಾಸಿಯಾಗಿರುವ ಶಿಕ್ಷಕ ಶಿವಾನಂದ ಗಣಪತಿ ಹರಿಕಂತ್ರ (೫೯) ಗಾಯಗೊಂಡವರು (Teacher injured). ಇವರು ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಹೊನ್ನಾವರ (Honnavar) ಕಡೆಯಿಂದ ಮುರ್ಡೇಶ್ವರ (Murudeshwar) ಕಡೆಗೆ ಸ್ಕೂಟಿ ಮೇಲೆ ಬರುತ್ತಿದ್ದಾಗ ಹಿಂಬದಿಯಿಂದ ಮೋಟಾರ್‌ ಸೈಕಲ್‌ ಡಿಕ್ಕಿ ಹೊಡೆದಿದೆ. ಮೋಟಾರ್‌ ಸೈಕಲ್‌ ಸವಾರ ಹೊನ್ನಾವರ ತಾಲೂಕಿನ ಮಂಕಿಯ ಮಡಿ ನಿವಾಸಿ ಫೆಲಿಕ್ಸ್‌ ಜೂಜೆ ಫರ್ನಾಂಡಿಸ್‌ (೪೭) ವಿರುದ್ಧ ದೂರು (Complaint) ದಾಖಲಾಗಿದೆ. ಮುರ್ಡೇಶ್ವರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : young farmer death/ ಜನತಾ ಬ್ಯಾಂಕಿನಲ್ಲಿ ಸಾಲ ಮಾಡಿದ್ದ ಯುವ ರೈತ ಬಾವಿಗೆ ಹಾರಿದ