ಭಟ್ಕಳ: ದೇಶಾದ್ಯಂತ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಇಂಡಿಯಾ ಎಐ ಇಂಪ್ಯಾಕ್ಟ್ ಸಮ್ಮಿಟ್ ಅಂಗವಾಗಿ ಶ್ರೀ ಗುರು ಸುಧೀಂದ್ರ ಕಾಲೇಜಿನ (SGS College) ಶಿಕ್ಷಕರು ಡಿಜಿಟಲ್ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಐತಿಹಾಸಿಕ ಅಭಿಯಾನಕ್ಕೆ (Responsible AI) ಸಾಕ್ಷಿಯಾದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನೈತಿಕ ಎಐಗಾಗಿ ಸಂಕಲ್ಪ ಹೊಂದಿರುವ ಕೇಂದ್ರ ಸರ್ಕಾರದ ಇಂಡಿಯಾ ಎಐ ಮಿಷನ್ ಮತ್ತು ಇಂಟೆಲ್ ಇಂಡಿಯಾ ಸಹಯೋಗದಲ್ಲಿ ಆಯೋಜಿಸಲಾದ ಈ ‘ಎಐ ರೆಸ್ಪಾನ್ಸಿಬಿಲಿಟಿ ಕ್ಯಾಂಪೇನ್ ಅಡಿಯಲ್ಲಿ ಶಿಕ್ಷಕರು ಡಿಜಿಟಲ್ ಪ್ರತಿಜ್ಞೆ ಕೈಗೊಂಡರು. ಕೃತಕ ಬುದ್ಧಿಮತ್ತೆಯನ್ನು ಜವಾಬ್ದಾರಿಯುತವಾಗಿ, ನೈತಿಕವಾಗಿ ಮತ್ತು ಮಾನವೀಯ ಮೌಲ್ಯಗಳಿಗೆ ಪೂರಕವಾಗಿ ಬಳಸುವ ಬಗ್ಗೆ ಈ ಅಭಿಯಾನವು (Responsible AI)ಒತ್ತು ನೀಡಿದೆ. ಕಾಲೇಜಿನ ಪ್ರಾಚಾರ್ಯರು, ಉಪ-ಪ್ರಾಚಾರ್ಯರು, ಪ್ರಾಧ್ಯಾಪಕರು ಡಿಜಿಟಲ್ ಪ್ರತಿಜ್ಞೆ ಅಭಿಯಾನದಲ್ಲಿ ಭಾಗಿಯಾದರು.
Makkala Santhe/ಸಾವಯವ ಕೃಷಿ ಉತ್ಪನ್ನಗಳೇ ಮಕ್ಕಳ ಸಂತೆಯ ಆಕರ್ಷಣೆ



