ಯಾದಗಿರಿ (Yadgir) : ಯಾದಗಿರಿ ತಾಲೂಕಿನ ಜೀನಕೇರಾ ತಾಂಡದಲ್ಲಿ ಸಿಡಿಲು ಬಡಿದ ಪ್ರಕರಣಕ್ಕೆ (Yadgir lightning) ಸಂಬಂಧಿಸಿದಂತೆ ಮೃತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜೀನಕೇರಾ ತಾಂಡದಲ್ಲಿ ಜಮೀನಿನಲ್ಲಿ ಕೆಲಸ ಮಾಡ್ತಿದ್ದ ವೇಳೆ ಸಿಡಿಲು ಬಡಿದಿತ್ತು. ನಾಲ್ವರು ದೇವಸ್ಥಾನದಲ್ಲಿ ನಿಂತಾಗ ಸಿಡಿಲು ಬಡಿದು ಸಾವನ್ನಪ್ಪಿದ್ದರು. ಓರ್ವ ಮಹಿಳೆ ಮನೆಯಲ್ಲಿದ್ದಾಗ ಸಿಡಿಲಿನ ಆರ್ಭಟಕ್ಕೆ ಬಲಿಯಾಗಿದ್ದಾರೆ. ಏಳು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಯಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅವರಿಗೆ ಯಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಇದನ್ನೂ ಓದಿ : ಸಿಡಿಲು ಬಡಿದು ನಾಲ್ವರು ಸಾವು
ಕಿಶನ್ ಜಾಧವ್ (೨೫), ಸಹೋದರ ಚನ್ನಪ್ಪ ಜಾಧವ (೧೮) ಮತ್ತು ಸಹೋದರಿ ಸುನೀಬಾಯಿ ರಾಠೋಡ (೨೭) ಸ್ಥಳದಲ್ಲೇ ಮೃತಪಟ್ಟಿದ್ದರು. ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡ ಬಾಲಕ ನೇನು ಜಾಧವ(೧೫) ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಸಾವನ್ನಪ್ಪಿದ್ದ. ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಇವರೆಲ್ಲರೂ ಕುಟುಂಬಸ್ಥರ ಜೊತೆ ಉಳ್ಳಾಗಡ್ಡಿ ಹಚ್ಚಲು ತೆರಳಿದ್ದರು. ಈ ವೇಳೆ ಭಾರಿ ಮಳೆಯಿಂದ ಮಳೆಗೆ ರಕ್ಷಣೆ ಮಾಡಿಕೊಳ್ಳಲು ದೇವಸ್ಥಾನದೊಳಗೆ ತೆರಳಿದ್ದರು. ರಕ್ಷಣೆಗಾಗಿ ದೇವಸ್ಥಾನದೊಳಗೆ ಹೋದರೂ ಸಿಡಿಲು ಅವರನ್ನು ಬಿಡಲಿಲ್ಲ(Yadgir lightning).
ಇದನ್ನೂ ಓದಿ : ೨೬ರಿಂದ ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರ