ಭಟ್ಕಳ (Bhatkal): ರಾಜ್ಯ ಮಾಹಿತಿ ಹಕ್ಕು (RTI) ಸಾಮಾಜಿಕ ಕಾರ್ಯಕರ್ತರ ವೇದಿಕೆ ಉತ್ತರ ಕನ್ನಡ ಹಾಗೂ ಭಟ್ಕಳ ಘಟಕ ವತಿಯಿಂದ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ (satyagraha) ನಿರತರನ್ನು ಶನಿವಾರ ಸಂಜೆ ಪೊಲೀಸರು ವಶಪಡಿಸಿಕೊಂಡು (police arrest) ನಂತರ ಬಿಡುಗಡೆಗೊಳಿಸಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ವ್ಯಾನಿನಲ್ಲಿ ಕರೆದೊಯ್ಯುತ್ತಿದ್ದಂತೆ ತಹಶೀಲ್ದಾರರು (Tahasildar) ಖುದ್ದು ನಿಂತು ಪ್ರತಿಭಟನಾ ಸ್ಥಳವನ್ನು ಖುಲ್ಲಾ ಪಡಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ತಾಲೂಕಾ ಆಡಳಿತದಿಂದ ಪೋಲಿಸ್‌ ಇಲಾಖೆಗೆ ಪತ್ರ ಬರೆದು, ಪ್ರತಿಭಟನಾ ನಿರತರನ್ನು ತೆರವುಗೊಳಿಸುವಂತೆ ಸೂಚಿಸಿದ್ದರು. ಧರಣಿಗೆ ಅನುಮತಿ ನೀಡಿರುವುದನ್ನು ರದ್ದು ಪಡಿಸಲಾಗಿದೆ. ಧರಣಿ ನಡೆಸುತ್ತಿರುವ ಸ್ಥಳವು ತಾಲೂಕಿನ ಕಾನೂನು ಸುವ್ಯವಸ್ಥೆ ಹದಗೆಡುವ ಸಂಭವವಿರುವುದರಿಂದ ಧರಣಿ ತೆರವುಗೊಳಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರ ಉಲ್ಲೇಖಿಸಿದ್ದರು. ಈ ಬಗ್ಗೆ ಗ್ರಾಮೀಣ ಠಾಣೆ ಪಿ.ಐ. ಚಂದನ್ ಧರಣಿ ನಿರತರಿಗೆ ತಿಳಿಸಿದರು. ಆದರೆ ಪ್ರತಿಭಟನಾಕಾರರು ಧರಣಿ ಮೊಟಕುಗೊಳಿಸಲು ನಿರಾಕರಿಸಿದ್ದರಿಂದ ತಹಶೀಲ್ದಾರ್ ಸಮ್ಮುಖದಲ್ಲಿ ಧರಣಿ ನಿರತರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ನಗರ ಠಾಣೆಗೆ ಕರೆದೊಯ್ದರು (police arrest). ಈ ಸಂದರ್ಭ ಸ್ಥಳದಲಿ ಬಿಗಿ ಪೊಲೀಸ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಿಡಿಯೋ ಸಹಿತ ಇದನ್ನೂ ಓದಿ : ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ರಕ್ತದಾನ ಮಾಡಿದ ೩೬ ಜನ

ಇದಕ್ಕೂ ಪೂರ್ವದಲ್ಲಿ ಸಂಜೆ ೪ ಗಂಟೆ ವೇಳೆಗೆ ತಹಶೀಲ್ದಾರ್ ಸ್ಥಳಕ್ಕೆ ಬಂದು ವರ್ಗಾವಣೆ ಮಾಡಲು ೨ ತಿಂಗಳ ಕಾಲಾವಕಾಶ ಕೇಳಿ ಅವರ ಸಹಿ ಇರುವ  ಪತ್ರವನ್ನು ಪ್ರತಿಭಟನಾಕಾರರಿಗೆ ನೀಡಿದರು. ಆದರೆ ಪ್ರತಿಭಟನಾಕಾರರು ಇದನ್ನು ನಿರಾಕರಿಸಿದರು. ವರ್ಗಾವಣೆ ಪ್ರಕ್ರಿಯೆ ನಿಮ್ಮ ಹಂತದಲ್ಲಿ ನಡೆಯುದಿಲ್ಲ. ನಿಮ್ಮ ಲೆಟರ್ ಹೆಡ್ ನಮಗೆ ಬೇಡ. ಜಿಲ್ಲಾಧಿಕಾರಿಗಳಿಂದ ಪತ್ರ ನೀಡಿದರೆ ಮಾತ್ರ ಧರಣಿ ನಿಲ್ಲಿಸುತ್ತೇವೆ ಎಂದಿದ್ದರು.

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.