ಭಟ್ಕಳ (Bhatkal): ಇಂಡಿಯನ್ ನವಾಯತ್ ಫೋರಂ (INF) ವತಿಯಿಂದ ಬರುವ ಜ.11 ರಿಂದ 15ರವರೆಗೆ ಐದು ದಿನಗಳ ಕಾಲ ಭಟ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಐಸ್ ಫ್ಯಾಕ್ಟರಿ ಹತ್ತಿರದ ಇಂಡಿಯನ್ ಆಯಿಲ್ ಪೆಟ್ರೋಲ್ ಪಂಪ್ ಎದುರು INF ಟ್ರೇಡ್ ಎಕ್ಸ್‌ಪೋ (Trade Expo)-2025 ಆಯೋಜಿಸಲಾಗಿದೆ ಎಂದು ಇಂಡಿಯನ್ ನವಾಯತ್ ಫೋರಂ ಅಧ್ಯಕ್ಷ ಅರ್ಷದ್ ಮೊಹತೆಶಮ್ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಖಾಜಿಯ ಬಂಗ್ಲೆ ಎದುರು ಇರುವ ಐ.ಎನ್.ಎಫ್. ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿದರು. ಈ ಎಕ್ಸ್‌ಪೋ ವ್ಯಾಪಾರಸ್ಥರು ಮತ್ತು ಉದ್ಯಮಿಗಳಿಗೆ ಬೆಳವಣಿಗೆಯ ಹೊಸ ಮಾರ್ಗಗಳನ್ನು ತೆರೆಯುವ ಉದ್ದೇಶ ಹೊಂದಿದೆ. ಸ್ಥಳೀಯ ವ್ಯಾಪಾರಗಳಿಗೆ ಸಬಲೀಕರಣದ ನೂತನ ವೇದಿಕೆ ಒದಗಿಸಿಕೊಡಲಿದೆ. ೨೦೨೨ರಲ್ಲಿ ಜರುಗಿದ INF ಟ್ರೇಡ್ ಎಕ್ಸ್‌ಪೋ (Trade Expo) ಸ್ಥಳೀಯ ವ್ಯಾಪಾರಿಗಳಿಗೆ ಬಲವರ್ದನೆ ನೀಡಿತ್ತು. ೧೮೦ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸಿದ ಈ ಎಕ್ಸ್‌ಪೋ ವ್ಯಾಪಾರ ಕ್ಷೇತ್ರಕ್ಕೆ ಮಹತ್ತರ ಒತ್ತಾಸೆಯಾಗಿತ್ತು. ೨೦೨೫ಈ ಎಕ್ಸ್ ಪೋ ಮತ್ತಷ್ಟು ದೊಡ್ಡದಾಗಿ, ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯಲಿದೆ. ೨೦೦ಕ್ಕೂ ಹೆಚ್ಚು ಸ್ಟಾಲ್‌ಗಳು ಹಾಗೂ ೨೦೦೦೦ಕ್ಕೂ ಅಧಿಕ ಸಂದರ್ಶಕರನ್ನು ಸೆಳೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂಓದಿ: ಕಳೆದುಹೋಗಿದ್ದ ಮೊಬೈಲ್‌ ಪತ್ತೆ

೨೦೨೫ರ ಎಕ್ಸ್‌ಪೋ ದಲ್ಲಿ ಕಾರ್ಯಾಗಾರಗಳು ಮತ್ತು ನೆಟ್‌ವರ್ಕಿಂಗ್ ಅವಕಾಶಗಳಾದ ವ್ಯಾಪಾರ ನೋಂದಣಿ ಮಾರ್ಗದರ್ಶನ, ಆಹಾರ ಉದ್ಯಮದ ನಿಯಮಾವಳಿ ಮತ್ತು ಪ್ಯಾಕೇಜಿಂಗ್ ತಂತ್ರಗಳು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಮೇಲೆ ವ್ಯಾಪಾರ ಪ್ರಾರಂಭದ ಸಲಹೆಗಳು, ದಾಸ್ತಾನು ನಿರ್ವಹಣೆ ಮತ್ತು ಬಿಲ್ಲಿಂಗ್ ತಂತ್ರಜ್ಞಾನಗಳು ಒಳಗೊಂಡಿದೆ. ಈ ಕಾರ್ಯಾಗಾರಗಳನ್ನು ಚಾರ್ಟರ್ಡ್ ಅಕೌಂಟೆಂಟ್‌ಗಳು ಮತ್ತು ತಜ್ಞರು ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ INF ಕಾರ್ಯದರ್ಶಿ ಮತ್ತು INF ಟ್ರೇಡ್ ಎಕ್ಸ್‌ಪೋ ೨೦೨೫ರ ಸಂಚಾಲಕ ಮಾಜ್ ಜುಕಾಕು, ಕಾರ್ಯಕಾರಿ ಸದಸ್ಯರಾದ ಫೈಜಾನ್ ಭರ್ಮಾವರ್, ಅಫ್ತಾಬ್ ಕೋಲಾ, ಇಮ್ತಿಯಾಜ್ ದಾಮ್ಡಾ, ತನ್ವೀರ್ ಮೋಟಿಯಾ, ಖಮರ್‍ ಉಝ್ಝಮಾ ಮೋಟಿಯಾ, ಹ್ಯಾರಿಸ್ ಶಾಬಂದರಿ ಉಪಸ್ಥಿತರಿದ್ದರು.

ಇದನ್ನೂ ಓದಿ : ಹಿರಿಯ ಮುತ್ಸದ್ದಿ ರಾಜಕಾರಣಿ ಎಸ್‌ ಎಂ ಕೃಷ್ಣ ಇನ್ನಿಲ್ಲ