ಭಟ್ಕಳ : ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದೆ. ಕಾರಣ, ಇಂದು ಮತ್ತು ನಾಳೆ ಕಾರವಾರ ಮತ್ತು ಯಶಪಂತಪುರ ನಡುವೆ ರೈಲು ಸಂಚಾರ ರದ್ದು ಮಾಡಲಾಗಿದೆ (train cancelled).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಇಂದು(ಆ.೧೧) ಸಂಜೆ ೬.೫೦ಕ್ಕೆ ಬೆಂಗಳೂರಿನಿಂದ ಕಾರವಾರಕ್ಕೆ ಹೊರಡುವ ಪಂಚಗಂಗಾ ಎಕ್ಸ್ಪ್ರೆಸ್ ರೈಲು ಸಂಚಾರ ರದ್ದಾಗಿದೆ. ನಾಳೆ ಕಾರವಾರದಿಂದ ಬೆಂಗಳೂರಿಗೆ ಹೊರಡುವ ಪಂಚಗಂಗಾ ಎಕ್ಸ್ಪ್ರೆಸ್ ಕೂಡ ರದ್ದು ಮಾಡಲಾಗಿದೆ (train cancelled).
ಇದನ್ನೂ ಓದಿ : ಬ್ರೆಜಿಲ್ ಯುವತಿ ವರಿಸಿದ ಮಂಗಳೂರಿನ ಯುವಕ
ಅದೇ ರೀತಿ, ಇಂದಿನ ಯಶವಂತಪುರ-ಮಂಗಳೂರು ಜಂಕ್ಷನ್ (೧೬೫೭೫) ಎಕ್ಸ್ಪ್ರೆಸ್ ಮತ್ತು ಮಂಗಳೂರು ಜಂಕ್ಷನ್-ಯಶವಂತಪುರ (೧೬೫೪೦) ಎಕ್ಸ್ಪ್ರೆಸ್ ರೈಲು ರದ್ದು ಮಾಡಲಾಗಿದೆ.
ಇದನ್ನೂ ಓದಿ : ಜನಮನ ಸೂರೆಗೊಂಡ ಯಕ್ಷಗಾನ ಪ್ರದರ್ಶನ
ನೈಋತ್ಯ ರೈಲ್ವೆಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ. ರೈಲು ಸಂಚಾರ ಮರುಸ್ಥಾಪಿಸಲು ಎಲ್ಲ ಕ್ರಮಕೈಗೊಳ್ಳಲಾಗುತ್ತಿದೆ. ಮುಂದೆ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇದ್ದಲ್ಲಿ ಸೂಚಿಸಲಾಗುವುದು ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಧರ್ಮನಿಷ್ಠೆಯಿಂದ ಯಮನನ್ನೂ ಗೆಲ್ಲಬಹುದು: ರಾಘವೇಶ್ವರಶ್ರೀ