ಭಟ್ಕಳ (Bhatkal) : ಎದುರಿನಿಂದ ಬರುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿಯಾಗಿ (car collision) ಬೈಕ್‌ ಸವಾರರಿಬ್ಬರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೈಕ್ ಸವಾರ ಕಟಗಾರಕೊಪ್ಪದ ಮಾಸ್ತಿ ನಾರಾಯಣ ಗೊಂಡ ಮತ್ತು ಹಿಂಬದಿ ಸವಾರ ಮುರ್ಡೇಶ್ವರ ಕಟಗಾರ ಹಲ್ಲಂದಿ ನಿವಾಸಿ ದಿವಾಕರ ತಿಮ್ಮಪ್ಪ ಗೊಂಡ (೨೦) ಗಾಯಗೊಂಡವರು. ಚಿತ್ರಾಪುರದ ರೈಲ್ವೆ ಸೇತುವೆಯ ಇಳಿಜಾರಿನಲ್ಲಿ ಬಾಕಡಕೇರಿ ಕ್ರಾಸ್‌ ಬಳಿ ಅಪಘಾತ ನಡೆದಿದೆ. ಕಾರು ಬಾಕಡಕೇರಿಯಿಂದ ಶಿರಾಲಿ ಕಡೆಗೆ ಬರುತ್ತಿದ್ದಾಗ ಕಟಗಾರಕೊಪ್ಪಕ್ಕೆ ಹೋಗುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ (car collision). ಕಾರು ಚಾಲಕ ಮೂಡುಬಿದ್ರೆಯ ರಾಜೇಶ ಪ್ರಭಾಕರ ನಾಯಕ ವಿರುದ್ಧ ದೂರು (complaint) ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : road accident/ ರಸ್ತೆ ಅಪಘಾತದಲ್ಲಿ ಮುಂಡಗೋಡಿನ ಟೆಕ್ಕಿ ಸಾವು