ಭಟ್ಕಳ: ಮಹಾಶಿವರಾತ್ರಿ (Maha Shivaratri) ಅಂಗವಾಗಿ ಭಾನುವಾರ ಮುಂಜಾನೆ ೩.೩೦ರ ವೇಳೆಗೆ ೫ ಸಾವಿರಕ್ಕೂ ಅಧಿಕ ಭಕ್ತರು ಮುರ್ಡೇಶ್ವರಕ್ಕೆ (Murudeshwar) ಭೇಟಿ ನೀಡಿ ವಿಶೇಷ ಪೂಜೆ–ಪುನಸ್ಕಾರ ಸಲ್ಲಿಸಿ ದೇವರ ದರ್ಶನ ಪಡೆದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿವನ ಪಂಚಕ್ಷೇತ್ರಗಳಲ್ಲೊಂದಾದ ಈ ಕ್ಷೇತ್ರದಲ್ಲಿ ಈ ಬಾರಿ ಮುಂಜಾನೆ ೩ ಗಂಟೆಯಿಂದಲೇ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ ದೇವಸ್ಥಾನದ (Shiva temple) ಹೊರಾಂಗಣದವರೆಗೂ ಭಕ್ತರ ದೀರ್ಘ ಸರದಿ ಸಾಲು ಕಂಡುಬಂತು.
Padayatre / ಮುರುಡೇಶ್ವರ ದೇವಸ್ಥಾನಕ್ಕೆ ಭಟ್ಕಳ ತಹಶೀಲ್ದಾರರ ಪಾದಯಾತ್ರೆ
ಮಹಾಶಿವರಾತ್ರಿ (Maha Shivaratri) ಪ್ರಯುಕ್ತ ದೇವಸ್ಥಾನದಲ್ಲಿ ರುದ್ರಾಭಿಷೇಕ, ಜಲಾಭಿಷೇಕ, ಬಿಲ್ವಪತ್ರ ಅರ್ಚನೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ನೆರವೇರಿದವು. ಸಮುದ್ರಸ್ನಾನ ಮಾಡಿ ದೇವರಿಗೆ ಅಭಿಷೇಕ ಸಲ್ಲಿಸುವ ಭಕ್ತರ ದೃಶ್ಯ ಗಮನಸೆಳೆಯಿತು. ದೂರದೂರಿನಿಂದ ಆಗಮಿಸಿದ ಭಕ್ತರು ಹಾಗೂ ಪ್ರವಾಸಿಗರು ಬೆಳಗ್ಗೆಯಿಂದಲೇ ದರ್ಶನಕ್ಕಾಗಿ ಸಾಲಿನಲ್ಲಿ ನಿಂತಿದ್ದರು. ಸಮುದ್ರತೀರ ಹಾಗೂ ದೇವಸ್ಥಾನದ ಸುತ್ತಮುತ್ತ ಜನಜಂಗುಳಿ ಕಂಡುಬಂತು.
Memorandum/ ಆಟೋರಿಕ್ಷಾ ಚಾಲಕರ ಆರೋಪ ಖಂಡಿಸಿದ ಟ್ಯಾಕ್ಸಿ ಚಾಲಕರು
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಭಟ್ಕಳ ಘಟಕದ ವತಿಯಿಂದ ಘೋಷ್ ವಾದನ ನಡೆಯಿತು. ದೇವಸ್ಥಾನದ ವ್ಯವಸ್ಥಾಪಕ ಮಂಜುನಾಥ ಶೆಟ್ಟಿ, ಮಾವಳ್ಳಿ ಪಂಚಾಯತ್‌ನ ಮಾಜಿ ಸದಸ್ಯ ಕೃಷ್ಣ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.



