ಭಟ್ಕಳ (Bhatkal) : ಲಾರಿಗೆ ಡಿಕ್ಕಿಯಾಗಿ (lorry collision) ಬೈಕ್ ಸವಾರರಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಮುರುಡೇಶ್ವರದ (Murudeshwar) ಬಸ್ತಿಮಕ್ಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ಚಲಾಯಿಸುತ್ತಿದ್ದ ಬೆಂಗಳೂರು (Bengaluru) ಕೆಂಗೇರಿ ವಾಸಿ ಅನೂಪ್ ಮಧುಸೂದನ್ (೨೭) ಮತ್ತು ಹಿಂಬದಿ ಸವಾರ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ಮೂಲದ ಹಾಲಿ ಬೆಂಗಳೂರು ವಾಸಿ ಪ್ರದೀಪ ಲಕ್ಷ್ಮಣ ಪೂಜಾರಿ (೨೭) ಗಾಯಗೊಂಡವರು. ಇವರಿಬ್ಬರೂ ಶಿರಸಿಯಿಂದ (Sirsi) ಮುರ್ಡೇಶ್ವರಕ್ಕೆ (Murdeshwar) ಬರುತ್ತಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : Prajakeeya/ ಮಕ್ಕಳಿಗೆ ಪ್ರಜಾಕೀಯ ಹೆಸರಿಟ್ಟ ಉಪೇಂದ್ರ ಅಭಿಮಾನಿ
ಬೈಕ್ನ ಮುಂದುಗಡೆ ಹೋಗುತ್ತಿದ್ದ ಲಾರಿ ಒಮ್ಮೇಲೆ ರಸ್ತೆಯ ಎಡಕ್ಕೆ ತಿರುಗಿಸಿದ್ದರಿಂದ ಲಾರಿಯ ಎಡಬದಿಯ ಮಧ್ಯಭಾಗಕ್ಕೆ ಬೈಕ್ ಡಿಕ್ಕಿಯಾಗಿದೆ (lorry collision). ಪರಿಣಾಮ ಬೈಕ್ ಸವಾರರಿಬ್ಬರೂ ಬಿದ್ದು ಗಾಯಗೊಂಡಿದ್ದಾರೆ. ಫೆ.೧೪ರಂದು ಸಂಜೆ ೪ ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಲಾರಿ ಚಾಲಕ ಮುರ್ಡೇಶ್ವರದ ಮಂಜುನಾಥ ನಾರಾಯಣ ನಾಯ್ಕ (೪೫) ವಿರುದ್ಧ ಪ್ರದೀಪ ಪೂಜಾರಿ ದೂರು (Complaint) ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಠಾಣೆ ಪೊಲೀಸರು ತನಿಖೆ (Investigation) ಕೈಗೊಂಡಿದ್ದಾರೆ.
ಇದನ್ನೂ ಓದಿ : Bhatkal/ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡ ವೃದ್ಧ