ಕಾರವಾರ (Karwar) : ಓಸಿ ಮಟಕಾದಲ್ಲಿ ಭಾಗಿಯಾದವರ ವಿರುದ್ಧ ಕಾನೂನಿನಂತೆ ಕ್ರಮಕೈಗೊಳ್ಳಲಾಗುವುದು ಎಂದು ಉತ್ತರ ಕನ್ನಡ (Uttara Kannada) ಜಿಲ್ಲಾ ಪೊಲೀಸ್ ಅಧೀಕ್ಷಕ ನಾರಾಯಣ ಎಂ. ಎಚ್ಚರಿಸಿದ್ದಾರೆ (ALERT).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಓ.ಸಿ. ಮಟಕಾ, ಅನಧಿಕೃತ ಲಾಟರಿ ಇದೊಂದು ಸಾಮಾಜಿಕ ಪಿಡುಗಾಗಿದೆ. ಇದರಲ್ಲಿ ತೊಡಗಿಸಿಕೊಂಡವರ ವಿರುದ್ದ ಕಾನೂನಿನಂತೆ ಕ್ರಮ ಜರುಗಿಸಲಾಗುವುದು. ನಿರಂತರವಾಗಿ ಇಂತಹ ಕೃತ್ಯಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಲ್ಲಿ, ಭದ್ರತಾ ಕಾಯ್ದೆಯಡಿ ಕ್ರಮ ಜರುಗಿಸುವುದಲ್ಲದೆ, ಕರ್ನಾಟಕ ಪೊಲೀಸ್ ಕಾಯ್ದೆ ಪ್ರಕಾರ ಗಡಿಪಾರು ಮಾಡಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ (ALERT).
ಇದನ್ನೂ ಓದಿ : BJP/ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಎನ್.ಎಸ್.ಹೆಗಡೆ ಕರ್ಕಿ ಪುನರಾಯ್ಕೆ
ಜಿಲ್ಲೆಯಲ್ಲಿ ೨೦೨೪ನೇ ಸಾಲಿನಲ್ಲಿ ಓ.ಸಿ. ಮಟಕಾಕ್ಕೆ ಸಂಬಂಧಿಸಿದಂತೆ ೨೭೨ ಪ್ರಕರಣಗಳನ್ನು ದಾಖಲಿಸಿ, ಸದ್ರಿ ಪ್ರಕರಣದಲ್ಲಿ ಭಾಗಿಯಾದ ೩೧೫ ಆರೋಪಿಗಳ ಮೇಲೆ ಕಾನೂನಿನಂತೆ ಕ್ರಮ ಕೈಗೊಳ್ಳಲಾಗಿದೆ. ದಾಳಿಯ ಕಾಲಕ್ಕೆ ಅವರಿಂದ ೫,೨೮,೯೫೫ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಹಾಗೂ ಅನಧಿಕೃತ ಲಾಟರಿಗೆ ಸಂಬಂಧಿಸಿದಂತೆ ೧ ಪ್ರಕರಣ ದಾಖಲಿಸಲಾಗಿದೆ. ಒಬ್ಬ ಆರೋಪಿತನ ಮೇಲೆ ಕಾನೂನು ಕ್ರಮ ಕೈಗೊಂಡು ೪೦೦ ರೂ ಬೆಲೆಯ ಲಾಟರಿ ಟಕೇಟುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ : Kumbh Mela/ ಮಹಾ ಕುಂಭಮೇಳದಲ್ಲಿ ಬೆಳಗಾವಿಯ ತಾಯಿ ಮಗಳು ಸಾವು