ಭಟ್ಕಳ (Bhatkal) : ಮಕ್ಕಳ ಆರೋಗ್ಯ (Childrens health) ಕುರಿತಂತೆ ಅತ್ಯಂತ ಜಾಗೃತಿ ವಹಿಸಬೇಕಾಗಿದೆ. ಭಟ್ಕಳದಲ್ಲಿ ಕಳೆದ ವರ್ಷ ಮಿಸೆಲ್ಸ್ ಕಾಯಿಲೆ ಉಲ್ಬಣಗೊಂಡಿರುವ ಕುರಿತು ಆರೋಗ್ಯ ಇಲಾಖೆ ವರದಿ ನೀಡಿದೆ. ಅಲ್ಲದೆ ಮಕ್ಕಳ ಲಸಿಕೆ (Vaccination) ಕುರಿತು ಹಲವು ತಪ್ಪು ಭಾವನೆಗಳಿವೆ. ಅವುಗಳನ್ನು ಹೋಗಲಾಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (WHO) ಸಲಹೆಗಾರ ಡಾ.ಸಿದ್ದಲಿಂಗಯ್ಯ ಎಚ್.ಎನ್. ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವ ಮಹತ್ವದ ಪ್ರಯತ್ನದಲ್ಲಿ ಸ್ಥಳೀಯ ಆರೋಗ್ಯ ಅಧಿಕಾರಿಗಳು ಭಟ್ಕಳದ ಮಜ್ಜಿಸೆ ಇಸ್ಲಾಹ್-ವ-ತಂಝೀಮ್ (Tanzeem) ಹಾಗೂ ರಾಬಿತಾ ಸೂಸೈಟಿ ಸಹಯೋಗದೊಂದಿಗೆ ಭಟ್ಕಳದಲ್ಲಿ ಮಕ್ಕಳ ಲಸಿಕೆ (Vaccination) ಹೆಚ್ಚಿಸುವ ಅಭಿಯಾನಕ್ಕೆ ಬುಧವಾರ ರಾಬಿತಾ ಸಭಾಂಗಣದಲ್ಲಿ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ.ಸಿದ್ದಲಿಂಗಯ್ಯ ಎಚ್.ಎನ್., ಇಂದು ಪ್ರಾರಂಭವಾದ ಲಸಿಕಾ ಅಭಿಯಾನವು ಪೋಲಿಯೊ, ದಡಾರ, ರುಬೆಲ್ಲಾ ಡಿಫೀರಿಯಾ ಮತ್ತು ಹೆಪಟೈಟಿಸ್ ಬಿ ಮುಂತಾದ ರೋಗಗಳನ್ನು ತಡೆಗಟ್ಟುವ ರಾಷ್ಟ್ರವ್ಯಾಪಿ ಉಪಕ್ರಮದ ಭಾಗವಾಗಿದೆ. ಲಸಿಕೆಗಳನ್ನು ಪೋಷಕರಿಗೆ ಸುಲಭವಾಗಿ ತಲುಪಿಸಲು ಪ್ರಯತ್ನ ಮಾಡಲಾಗುತ್ತಿದೆ. ವೈದ್ಯಕೀಯ ಸೌಲಭ್ಯಗಳು ಲಭ್ಯವಿಲ್ಲದ ಮಕ್ಕಳನ್ನು ತಲುಪಲು ಆರೋಗ್ಯ ಕಾರ್ಯಕರ್ತರು ದೂರದ ಪ್ರದೇಶಗಳಲ್ಲಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಭಟ್ಕಳದಲ್ಲಿ ಕರಾವಳಿ ಕಾವಲು ಪಡೆ ಅಣಕು ಕಾರ್ಯಾಚರಣೆ ಯಶಸ್ವಿ
ಯುನಿಸೆಫ್ (Unicef) ಸಲಹೆಗಾರ ಮನೋಜ್ ಸೆಬಸ್ಟೆನ್ ಮಾತನಾಡಿ, ಸಮುದಾಯದ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳಾದ ತಂಝೀಮ್ ಮತ್ತು ರಾಬಿತಾ ಸಂಸ್ಥೆಗಳು ಜಾಗೃತಿ ಮೂಡಿಸುವ ಮೂಲಕ ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರನ್ನು ಉತ್ತೇಜಿಸುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ : ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ
ಭಟ್ಕಳದ ಮಕ್ಕಳ ವೈದ್ಯ ಡಾ. ಜಮೀಲ್ ಗವಾಯಿ ಮಾತನಾಡಿ, ಮಕ್ಕಳ ಲಸಿಕೆ ಕುರಿತಂತೆ ನಮ್ಮಲ್ಲಿನ ತಪ್ಪಕಲ್ಪನೆಗಳನ್ನು ದೂರ ಮಾಡಬೇಕಾದುದು ಅತಿ ಅವಶ್ಯಕವಾಗಿದೆ. ಸಮುದಾಯದ ವಿವಿಧ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಚರಣೆಗಿಳಿದಿರುವುದು ತುಂಬಾ ಸಂತೋಷ ಎಂದರು.
ಇದನ್ನೂ ಓದಿ : ಭಟ್ಕಳದಿಂದ ಕರ್ನಾಟಕ ಸಂಭ್ರಮ ೫೦ರ ಜ್ಯೋತಿ ರಥಯಾತ್ರೆ ಆರಂಭ
ತಾಲ್ಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ, ಭಟ್ಕಳದಲ್ಲಿ ಎಲ್ಲ ರೀತಿಯಿಂದಲೂ ಉತ್ತಮವಾಗಿದ್ದು ಇಲ್ಲಿನ ಮಹಿಳೆಯರು ಜಾಗರೂಕರಾಗಿದ್ದಾರೆ. ಹೆರಿಗೆ ಪೂರ್ವ ಗರ್ಭಪಾತ ಇಲ್ಲಿ ಆಗುವುದಿಲ್ಲ. ಆದರೆ ಮಕ್ಕಳ ಲಸಿಕೆ ಕುರಿತು ಇನ್ನೂ ಜಾಗೃತರಾಗಬೇಕಾಗಿದೆ ಎಂದರು.
ಇದನ್ನೂ ಓದಿ : ಅ.೨೦ರಂದು ರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ ಶಿಪ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಕ್ಕಳ ಆರೋಗ್ಯ ಕುರಿತು ಮಾತೆಯರು ಜಾಗೃತಿ ವಹಿಸುವಂತೆ ಕರೆ ನೀಡಿದರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಜಿದ್ದಾ ಮುಸ್ಲಿಮ್ ಜಮಾತ್ ಅಧ್ಯಕ್ಷ ಖಮರ್ ಸಾದಾ ಮಾತನಾಡಿದರು. ತಂಝೀಮ್ ಸಂಸ್ಥೆಯ ಪದಾಧಿಕಾರಿ ಇಕ್ಬಾಲ್ ಜಾವೀದ್ ಕಾರ್ಯಕ್ರಮ ನಿರೂಪಿಸಿದರು.