ಭಟ್ಕಳ (Bhatkal) : ಸಾಮಾಜಿಕ ಜಾಲತಾಣದ (Social Media) ಮೂಲಕ ವಿವಾಹಿತ ಮಹಿಳೆಯೋರ್ವಳಿಗೆ ಅಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಲ್ಲದೆ ವಿಡಿಯೋ ಕಾಲ್‌ (Video Call) ಮಾಡಿ ಬೆತ್ತಲೆಯಾಗಿ ಕಾಣಿಸಿಕೊಳ್ಳುತ್ತಿದ್ದ ಚಪಲ ಚೆನ್ನಿಗರಾಯನ ವಿರುದ್ಧ ಭಟ್ಕಳ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಬಂದರ್ ರಸ್ತೆಯ ನಿವಾಸಿ ಶಾದಾಬ್‌ ಅಹ್ಮದ್‌ ಕೋಲಾ ವಿರುದ್ಧ ದೂರು ದಾಖಲಿಸಲಾಗಿದೆ. ಆರೋಪಿಯು ತನ್ನ ಫೇಸ್‌ಬುಕ್‌ (facebook) ಐಡಿಯಿಂದ ಕೆಟ್ಟ ಸಂದೇಶ ಮತ್ತು ಅಶ್ಲೀಲ ಫೋಟೊಗಳನ್ನು ಕಳುಹಿಸುತ್ತಿದ್ದ. ಅಲ್ಲದೆ ಫೇಸ್‌ಬುಕ್‌ ಮೂಲಕ ವಿಡಿಯೋ ಕಾಲ್‌ (Video Call) ಮಾಡಿ ತನ್ನ ಖಾಸಗಿ ಅಂಗಗಳನ್ನು ತೋರಿಸುತ್ತಿದ್ದ. ಅಷ್ಟೇ ಅಲ್ಲದೆ ವಾಟ್ಸಪ್‌ (WhatsApp) ಮೂಲಕ ವಿಡಿಯೋ ಕಾಲ್‌ ಮಾಡಿ ಬೆತ್ತಲೆ ದೇಹ ತೋರಿಸಿದರೆ ೧ರಿಂದ ೨ ಲಕ್ಷದವರೆಗೆ ಹಣ ನೀಡುವುದಾಗಿ ಹೇಳಿರುವುದಾಗಿ ಮಹಿಳೆಯು ದೂರಿನಲ್ಲಿ ಆರೋಪಿಸಿದ್ದಾಳೆ. ಅಷ್ಟಕ್ಕೂ ನಿಲ್ಲದ ಈತ ಮೆಸೇಜ್‌ ಮಾಡಿ ಮಾನಕ್ಕೆ ಕುಂದುಬರುವಂತೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ : ವಾಕರಸಾ ಸಂಸ್ಥೆಯಿಂದ ಹೆಚ್ಚುವರಿ ಬಸ್‌ ಸೇವೆ

ಭಟ್ಕಳ ಶಹರ ಪೊಲೀಸ್‌ ಠಾಣೆಯಲ್ಲಿ ಐಟಿ ಕಾಯ್ದೆ (IT Act) ಯಡಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ಶಿವಾನಂದ ನಾವದಗಿ ತನಿಖೆ ಕೈಗೊಂಡಿದ್ದಾರೆ.