ಭಟ್ಕಳ (Bhatkal): ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ (RNS College) ದ್ವಿತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮುರುಡೇಶ್ವರದ (murudeshwara) ಆರ್ ಎನ್ ಎಸ್ ಶಿಕ್ಷಣ ಸಂಸ್ಥೆಯ ಮಾಜಿ ನಿರ್ದೇಶಕ ಎಂ ವಿ ಹೆಗಡೆ, ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿ ಆರ್ ಎನ್ ಎಸ್ ಶಿಕ್ಷಣ ಸಂಸ್ಥೆಯು ಮುರುಡೇಶ್ವರದಲ್ಲಿ (Murdeshwar )ನಡೆದು ಬಂದ ಹಾದಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.

ಇದನ್ನು ಓದಿ: National award/ ವಿದ್ಯಾಂಜಲಿ ಶಾಲೆಗೆ ಸತತ ೨ನೇ ವರ್ಷ ರಾಷ್ಟ್ರ ಪ್ರಶಸ್ತಿ ಪುರಸ್ಕಾರ

ಕಾರ್ಯಕ್ರಮದಲ್ಲಿ ಮುರುಡೇಶ್ವರದ ಆರ್ ಎನ್ ಎಸ್ ವಿದ್ಯಾನಿಕೇತನದ ಪ್ರಾಚಾರ್ಯೆ ಗೀತಾ ಕಿಣಿ ಉಪಸ್ಥಿತರಿದರು. ಆರ್ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜಿನ (RNS College) ಪ್ರಾಚಾರ್ಯೆ ಅಶ್ವಿನಿ ಶೇಟ ಅಧ್ಯಕ್ಷತೆ ವಹಿಸಿಕೊಂಡಿದ್ದರು. ವಾರ್ಷಿಕ ಸಂಯೋಜಕ ಕೃಷ್ಣಪ್ರಸಾದ ಪಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯಸ್ಥ ರಾಮ ಖಾರ್ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನು ಓದಿ: Namadhari/ ನಾಮಧಾರಿಗಳ ಏಳಿಗೆಗಾಗಿ ಹೊಸ ವಿದ್ಯಾಸಂಸ್ಥೆ

ನಂತರ ವಿದ್ಯಾರ್ಥಿಗಳಲ್ಲಿರುವ ವಿವಿಧ ಪ್ರತಿಭೆಯ ಅನಾವರಣ ಕಾರ್ಯಕ್ರಮ ನಡೆಯಿತು. ಸಮೃದ್ಧಿ ಸ್ವಾಗತಿಸಿದರು, ಮಹಮ್ಮದ್ ರಿಹಾನ ವಂದಿಸಿದರು, ಶಿವಾನಿ ಮತ್ತು ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.

ಇದನ್ನು ಓದಿ: digital election/ ಡಿಜಿಟಲ್ ತಂತ್ರಜ್ಞಾನ ಬಳಸಿ ಚುನಾವಣೆ