ಭಟ್ಕಳ: ಮೆದುಳು ರೋಗಕ್ಕೆ (brain disease) ಹೆದರಿದ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮುರುಡೇಶ್ವರದಲ್ಲಿ (Murudeshwar) ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ (Bhatkal) ತಾಲೂಕಿನ ಮುರುಡೇಶ್ವರದ ಮಾವಳ್ಳಿ ಸೋನಾರಕೇರಿಯ ಗುಲಾಬಿ ಸುಕ್ರಾ ನಾಯ್ಕ (೩೫) ಆತ್ಮಹತ್ಯೆ ಮಾಡಿಕೊಂಡವರು. ಮನೆ ಕೆಲಸ ಮಾಡಿಕೊಂಡಿದ್ದ ಅವರಿಗೆ ೧೫ ವರ್ಷದ ಹಿಂದೆ ಮೆದುಳು ಸಂಬಂಧಿತ ರೋಗ (brain disease) ಕಾಣಿಸಿಕೊಂಡಿತ್ತು. ಕೆಲ ಕಾಲದ ನಂತರ ಪೀಡ್ಸ ಸಹ ಶುರುವಾಗಿದ್ದು, ಅನಾರೋಗ್ಯದ ಕಾರಣ ಗುಲಾಬಿ ನಾಯ್ಕ ಸದಾ ಮಂಕಾಗಿರುತ್ತಿದ್ದರು. ರೋಗದ ಬಗ್ಗೆ ಯೋಚಿಸುತ್ತಿದ್ದ ಅವರು ಆತ್ಮಹತ್ಯೆಯ ನಿರ್ಧಾರ ಮಾಡಿದರು.
ಇದನ್ನು ಓದಿ: bodybuilding competition/ ೨೮ರಂದು ಭಟ್ಕಳದಲ್ಲಿ ರಾಜ್ಯಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆ
ಫೆ ೧೨ರಂದು ಮನೆಯ ಮಲಗುವ ಕೋಣೆಗೆ ಹೋದ ಅವರು ಜಂತಿಗೆ ವೇಲು ಕಟ್ಟಿ ಅಲ್ಲಿಯೇ ನೇಣಿಗೆ ಶರಣಾದರು. ಸಮೃದ್ಧಿ ಕೋ ಆಪರೇಟಿವ್ ಸೊಸೈಟಿಯಲ್ಲಿ ಕೆಲಸ ಮಾಡುವ ಮುಕ್ತಾ ನಾಯ್ಕ ಅವರು ಅಕ್ಕನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮುರುಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.



