ಯಲ್ಲಾಪುರ : ಬಾವಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕುಂದರಗಿಯಲ್ಲಿ ನಡೆದಿದೆ (Yallapura Crime).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಂದರಗಿಯ ಬಾಳೆಗದ್ದೆ ನಿವಾಸಿ ಮಂಜುನಾಥ ಅನಂತ ಸಿದ್ದಿ(೩೦) ಸಾವಿಗೆ ಶರಣಾದವ. ಈತ ಕಳೆದ ಎರಡು ವರ್ಷಗಳಿಂದ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ. ವೈದ್ಯರು ಹೇಳಿದಂತೆ ಮಾತ್ರೆ ಸೇವಿಸುತ್ತಿರಲಿಲ್ಲ. ಆಗಾಗ ಮಾನಸಿಕ ಅಸ್ವಸ್ತನಂತೆ ವರ್ತಿಸುತ್ತಿದ್ದ ಈತ ಅನಾರೋಗ್ಯದಿಂದ ಬಳಲುತ್ತಿದ್ದ. ಶುಕ್ರವಾರ ಬೆಳಿಗ್ಗೆ ೬ರಿಂದ ಮಧ್ಯಾಹ್ನ ೩ರ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ : ಜೆಸಿಬಿ ನಿಲ್ಲಿಸಿದ್ದಕ್ಕೆ ಅವಾಚ್ಯ ಶಬ್ದಗಳ ಬೈಗುಳ
ಬಾಳೆಗದ್ದೆಯ ಜಾಜಿಮನೆ ಶಿವರಾಮ ಹೆಗಡೆಯವರ ಜಮೀನಿನಲ್ಲಿರುವ ಬಾವಿಯಲ್ಲಿ ಹಾರಿದ್ದು, ನೀರಲ್ಲಿ ಮುಳುಗಿ ಮೃತಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮೃತ ಯುವಕನ ತಂದೆ ಅನಂತ ರಾಮಾ ಸಿದ್ದಿ ಪ್ರಕರಣ ದಾಖಲಿಸಿದ್ದು, ಆತನ ಸಾವಿನಲ್ಲಿ ಬೇರೆ ಯಾವುದೇ ಸಂಶಯ ಇಲ್ಲ ಎಂದು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಯಲ್ಲಾಪುರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ (Yallapura Crime).
ಇದನ್ನೂ ಓದಿ : ಮನೆಯಿಂದ ಹೋದ ಗಂಡ ನಾಪತ್ತೆ