ಭಟ್ಕಳ: ನಗರದ ಸಂಶುದ್ದಿನ್ ಸರ್ಕಲ್ ಹತ್ತಿರ ವಾಕರಸಾ (NWKRTC) ಸಂಸ್ಥೆಯ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಸೇವಿಸುತ್ತಿದ್ದ ಯುವಕನನ್ನು ಭಟ್ಕಳ (Bhatkal) ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ (Youth arrested).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬಂಧಿತ ಆರೋಪಿ ಹನೀಪಾಬಾದ್ ನಿವಾಸಿ ಮಹ್ಮದ್ ಮಂಜೂರ್ (28) ಎಂಬಾತನು ಸಾರ್ವಜನಿಕ ಸ್ಥಳದಲ್ಲೇ ಗಾಂಜಾ ಸೇವನೆ ಮಾಡುತ್ತಿರುವುದು ಗಮನಕ್ಕೆ ಬಂದಿತ್ತು. ಅವನ ಬಾಯಿಂದ ಘಾಟು ವಾಸನೆ ಬರುತ್ತಿರುವುದರಿಂದ ವಿಚಾರಣೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.

ಇದನ್ನು ಓದಿ: boy died/ ಮುರುಡೇಶ್ವರದಲ್ಲಿ ಎಂಟು ವರ್ಷದ ಬಾಲಕ ಸಾವು 

ನಂತರ ಆತನನ್ನು ವಶಕ್ಕೆ ಪಡೆದು (Youth arrested) ಭಟ್ಕಳ ತಾಲೂಕಾ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ. ನಗರ ಠಾಣೆ ಪಿಎಸೈ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು, ಆರೋಪಿ ವಿರುದ್ಧ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನು ಓದಿ: ration rice/ ಪಡಿತರ ಅಕ್ಕಿ ಸಾಗಿಸುತ್ತಿದ್ದ ವ್ಯಕ್ತಿ ಬಂಧನ