ಭಟ್ಕಳ : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಮಾರ್ಚ್ ತಿಂಗಳಲ್ಲಿ ನಡೆಸಿದ ಪಿಜಿ-ಎಂಬಿಎ ಮೂರನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಿಕಲ್ ಮತ್ತು ಮ್ಯಾನೇಜ್ಮೆಂಟ್ (ಎಐಟಿಎಂ) ಕಾಲೇಜಿಗೆ ಶೇ.೧೦೦ ಫಲಿತಾಂಶ ಲಭಿಸಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
೨೦೨೨-೨೪ನೇ ಸಾಲಿನ ಪಿಜಿ-ಎಂಬಿಎ ಮೂರನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಮೇ ೧೩ರಂದು ಪ್ರಕಟಗೊಂಡಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಂಯೋಜಿತ ಎಐಟಿಎಂನ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ೪೬ ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಅಂಕವನ್ನು ಪಡೆದು ಉತ್ತೀರ್ಣರಾಗಿದ್ದಾರೆ. ಎಐಟಿಎಂನ ಮ್ಯಾನೇಜ್ಮೆಂಟ್ ವಿಭಾಗವು ಈ ಸಲದ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಗಳಿಸುವಲ್ಲಿ ಯಶಸ್ವಿಯಾಗಿದೆ. ಅದೇ ರೀತಿ ಸಂಸ್ಥೆಯ ಒಟ್ಟೂ ಫಲಿತಾಂಶದಲ್ಲಿ ೩೫ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ. ಉಳಿದ ೧೧ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಬಂಧನ
ವಿದ್ಯಾರ್ಥಿನಿ ಐಶಾ ಲಿಮಿಸ್ ಅತಿ ಹೆಚ್ಚು ಅಂಕಗಳಿಸಿ (ಶೇ. ೮೫.೧೪) ಕಾಲೇಜಿಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಹುಮನಾ ಸಮಿಉಲ್ಲಾ (ಶೇ.೮೨.೪೨) ದ್ವಿತೀಯ ಮತ್ತು ಮಾಸುಮಾ (ಶೇ.೮೧.೫೭) ತೃತೀಯ ಸ್ಥಾನ ಪಡೆದು ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳಾದ ಅರ್ಪಿತ ಮಂಜುನಾಥ ನಾಯ್ಕ, ಮರಿಯಮ್ ಮುಬಿನ್, ಲೈಬಾ ಸಿಮ್ಮನ್, ಉಷಾ ಗಣಪತಿ ದೇವಡಿಗ, ರಕ್ಷಿತಾ ಶ್ರೀಧರ ನಾಯ್ಕ, ಯಿಫಾ, ಜ್ಯೋತಿ ಕೃಷ್ಣ ನಾಯ್ಕ ಕೂಡ ಉತ್ತಮ ಅಂಕ ಪಡೆದಿದ್ದಾರೆ.
ಇವರ ಸಾಧನೆಯು ಅಂಜುಮನ್ ಮ್ಯಾನೇಜ್ಮೆಂಟ್ ವಿಭಾಗದ ಶೈಕ್ಷಣಿಕ ಪ್ರಗತಿಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ಭವಿಷ್ಯದ ಅಭಿವೃದ್ಧಿ ಹಾಗೂ ಮುನ್ನಡೆಗೆ ನಾಂದಿಯಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲ ಡಾ| ಫಝಲೂರ್ ರೆಹಮಾನ್, ರಿಜಿಸ್ಟ್ರಾರ್ ಮತ್ತು ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಜಾಹಿದ್ ಕರೂರಿ ಹರ್ಷ ವ್ಯಕ್ತಪಡಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ವಿಭಾಗದ ಉಪನ್ಯಾಸಕ ವೃಂದದವರಿಗೆ ಅವರು ಅಭಿನಂದಿಸಿದ್ದಾರೆ. ವಿದ್ಯಾಸಂಸ್ಥೆಯ ಮ್ಯಾನೆಜ್ಮೆಂಟ್ ವಿಭಾಗದ ಅನುಭವಿ ಉಪನ್ಯಾಸಕರಾದ ಪ್ರೊ. ಪ್ರೀತಿ ಕೆ., ಪ್ರೊ. ಶ್ರೀಕಾಂತ, ಪ್ರೊ. ಸಾದ್, ಪ್ರೊ. ಮುಫಿಯಾ, ಪ್ರೊ. ತಸ್ವಿಯಾ ಹಾಗೂ ಮಾಧ್ಯಮ ಸಂಯೋಜಕ ಪ್ರೊ. ಸುಬ್ರಹ್ಮಣ್ಯ ಭಾಗವತ ಸಹ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದಿಸಿದ್ದಾರೆ.
ಪ್ರವೇಶಾತಿ ಆರಂಭ
ಈಗಾಗಲೇ ಎಐಟಿಎಂ ಕಾಲೇಜಿನ ಎಂಬಿಎ ವಿಭಾಗದ ೨೦೨೪-೨೫ನೇ ಸಾಲಿನ ಪ್ರವೇಶಾತಿ ಪ್ರಾರಂಭವಾಗಿದೆ. ವಿದ್ಯಾರ್ಥಿಗಳು ಕೆಳಗೆ ತಿಳಿಸಿದ ಆಡಳಿತ ವಿಭಾಗದ ಸದಸ್ಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಪ್ರಾಂಶುಪಾಲ ಡಾ| ಫಝಲೂರ್ ರೆಹಮಾನ್, ರಿಜಿಸ್ಟ್ರಾರ್ ಮತ್ತು ಎಂಬಿಎ ವಿಭಾಗದ ಮುಖ್ಯಸ್ಥ ಪ್ರೊ.ಜಾಹಿದ್ ಕರೂರಿ ಅಥವಾ ಎಂಬಿಎ ವಿಭಾಗದ ಪ್ಲೇಸ್ಮೆಂಟ್ ಸಂಯೋಜಕ ಪ್ರೊ.ಶ್ರೀಕಾಂತ ಆಚಾರ್ಯ ಅವರನ್ನು ಸಂಪರ್ಕಿಸಬಹುದಾಗಿದೆ.