ಭಟ್ಕಳ: ತಾಲೂಕಿನಾದ್ಯಂತ ಗುರುವಾರ ಸಂಜೆ ಗಾಳಿಮಳೆಗೆ ಹಲವು ಕಡೆಗಳಲ್ಲಿ ಮನೆಯ ಮೇಲೆ ಮರಬಿದ್ದು ಹಾನಿ ಸಂಭವಿಸಿದೆ.
ಇದನ್ನೂ ಓದಿ : ಮನೆಯೊಳಗೆ ನುಗ್ಗಿದ ಮಳೆ ನೀರು, ಕತ್ತಲಲ್ಲಿ ಭಟ್ಕಳ
ವೆಂಕ್ಟಾಪುರ ಗ್ರಾಮದ ನಿವಾಸಿಯಾದ ಲಕ್ಷ್ಮೀ ಸಣಕೂಸ ನಾಯ್ಕರವರ ಮನೆಯ ಮೇಲೆ ಅಡಿಕೆ ಮರ ಬಿದ್ದಿದೆ. ಮಾವಳ್ಳಿ ೧ ಗ್ರಾಮದ ಮಂಗಳಿ ಬೈರ ಹರಿಕಾಂತರ ಮನೆ ಮೇಲೆ ಸುರಿದ ಭಾರಿ ಗಾಳಿಮಳೆಗೆ ಮನೆಯ ಎದುರಿನ ಮೇಲ್ಛಾವಣಿ ಹಾನಿಯಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಗಾಳಿಮಳೆಯಿಂದ ಶಿರಾಲಿ ೧ ಗ್ರಾಮದ ಛಾಯಾ ಗಣಪತಿ ನಾಯ್ಕರ ವಾಸ್ತ್ಯವದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಮಣ್ಕುಳಿಯ ಮೋಹನ ಮಾಸ್ತಪ್ಪ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆಯ ಮೇಲ್ಛಾವಣಿ ಗಾಳಿ ಮಳೆಯಿಂದ ಕುಸಿದಿದೆ. ಹುರುಳಿಸಾಲಿನ ಕುಪ್ಪಯ್ಯ ಜಟ್ಟಪ್ಪ ನಾಯ್ಕರ ಮನೆಯ ಮೇಲೆ ತೆಂಗಿನ ಮರ ಬಿದ್ದಿದೆ. ಹೆಬಳೆ ಗ್ರಾಮದ ನಾಯ್ಕರಕೇರಿ ಮಜಿರೆಯ ಶಿವಾನಂದ ನಾಯ್ಕ ಎಂಬುವರ ವಾಸ್ತವ್ಯದ ಮನೆಮುಂದೆ ಎರಡು ತೆಂಗಿನಮರಗಳು ಬಿದ್ದಿವೆ. ಶಿರಾಲಿ ೨ ಗ್ರಾಮದ ಕೋಟೆಬಾಗಿಲು ಮಜಿರೆಯ ರವಿ ನಾಗಪ್ಪ ನಾಯ್ಕರ ವಾಸ್ತವ್ಯದ ಮನೆ ಮೇಲೆ ಅಡಿಕೆ ಮರ ಬಿದ್ದು ಹಾನಿಯಾಗಿದೆ.
ಸಂಜೆ ಬೀಸಿದ ಬಿರುಗಾಳಿಗೆ ನ್ಯಾಯಾಲಯದ ಆವರಣದಲ್ಲಿ ಇದ್ದ ಮರವೊಂದು ಉರುಳಿ ಬಿದ್ದಿದೆ. ಸಂಜೆಯಾದ್ದರಿಂದ ನ್ಯಾಯಾಲಯದ ಆವರಣದಲ್ಲಿ ಜಾಸ್ತಿ ವಾಹನ ಇಲ್ಲದೆ ಇರುವದರಿಂದ ಯಾವುದೇ ಹಾನಿ ಸಂಭವಿಸಿಲ್ಲ.