ಇದು ಭಟ್ಕಳ ಡೈರಿ ಎಕ್ಸ್‌ಕ್ಲೂಸಿವ್‌ ವರದಿ

ಭಟ್ಕಳ : ನಕಲಿ ಡ್ರೈವಿಂಗ್ ಲೈಸೆನ್ಸ್ ಹೊಂದಿದ ಆರೋಪದ ಮೇಲೆ ಬಂಧಿತ ಭಟ್ಕಳದ ಇಬ್ಬರು ವ್ಯಕ್ತಿಗಳ ಬಗ್ಗೆ ತನಿಖೆ ನಡೆಸುತ್ತಿರುವ ದೆಹಲಿ ವಿಶೇಷ ಘಟಕ ಭಟ್ಕಳಕ್ಕೆ ಬಂದು ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಇದನ್ನೂ ಓದಿ : ಕಂಟೇನರ್‌ ವಾಹನದಲ್ಲಿ ಸಾಗಿಸುತ್ತಿದ್ದ ೧೫ ಎತ್ತುಗಳ ರಕ್ಷಣೆ

ಭಟ್ಕಳದ ಮದೀನಾ ಕಾಲೋನಿಯ ಉಸ್ಮಾನಿಯಾ ಸ್ಟ್ರೀಟ್‌ ನಿವಾಸಿ ಕಾಕು ತೌಫಿಕ್ ಮತ್ತು ಆತನ ಸಹಚರ ಭಟ್ಕಳದ ಮಾರುಕಟ್ಟೆ ಪ್ರದೇಶದ ಹಯ್ಯನ್ ಕೋಲಾ ಅವರನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದರು. ಎರಡು ತಿಂಗಳ ಹಿಂದೆ ಜ.೧೬ರಂದು ಇವರಿಬ್ಬರನ್ನು ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಒಂದಲ್ಲ, ಎರಡಲ್ಲ, ಮೂರಲ್ಲ… ಬರೋಬ್ಬರಿ ಏಳು ನಕಲಿ ಡ್ರೈವಿಂಗ್ ಲೈಸೆನ್ಸ್ ಗಳನ್ನು ಇವರಿಬ್ಬರಿಂದ ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ವಿಷಯವನ್ನು ಐಜಿಐ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಅವರು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆಯನ್ನು ನಡೆಸಿದ್ದರು.

ಇಬ್ಬರೂ ಆರೋಪಿಗಳು ನಕಲಿ ಚಾಲನಾ ಪರವಾನಗಿಯನ್ನು ಹೊಂದಿರುವುದು ಕಂಡುಬಂದಿದೆ. ಹೆಚ್ಚುವರಿಯಾಗಿ, ಅವರು ಪಾಕಿಸ್ತಾನ ಮತ್ತು ದುಬೈ ಮೂಲದ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ ಎಂಬುದು ಕಂಡುಬಂದಿದೆ ಎಂದು ಮೂಲಗಳು
ತಿಳಿಸಿವೆ. ಮುಂಬೈನಲ್ಲಿ ನೆಲೆಸಿರುವ ಅವರ ಸಹಚರ ಅಬ್ದುಲ್ ಖಾದರ್ ಪ್ರಸ್ತುತ ಅಧಿಕಾರಿಗಳಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. 18 ವರ್ಷಗಳ ಹಿಂದೆ ಭಾರತವನ್ನು ತೊರೆದು ಗಡಿಯಾಚೆಗಿನ ಭಯೋತ್ಪಾದನೆ-ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ವಾಶಿಕ್ ಜೊತೆಗಿನ ಸಂವಹನವನ್ನು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ ದೆಹಲಿ ಮೂಲದ ಮಾಧ್ಯಮವೊಂದು ತಿಳಿಸಿದೆ.

ನಂತರ ಈ ಪ್ರಕರಣವನ್ನು ವಿಶೇಷ ಘಟಕಕ್ಕೆ ವರ್ಗಾಯಿಸಲಾಗಿದೆ. ದೆಹಲಿಯ ವಿಶೇಷ ಘಟಕದ ತಂಡವೊಂದು ಭಟ್ಕಳಕ್ಕೆ ತೆರಳಿ ಕಾಕು ಅವರ ಪತ್ನಿ ಸಹಿತ ಅವರ ಕುಟುಂಬಸ್ಥರನ್ನು ವಿಚಾರಣೆಗೆ ಒಳಪಡಿಸಿತ್ತು. ಆದರೆ, ಅವರು ಹೆದರಿಕೆಯಿಂದ ಲಿಖಿತ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಇಂಡಿಯನ್ ಮುಜಾಹಿದ್ದೀನ್ ಸಂಸ್ಥಾಪಕರ ಜೊತೆಗಿನ ಸಂಬಂಧದ ಬಗ್ಗೆಯೂ ತನಿಖಾಧಿಕಾರಿಗಳ ಮುಂದೆ ಅಲ್ಲಗಳೆದಿದ್ದಾರೆ.

ಈ ವಿಡಿಯೋ ನೋಡಿ : ಮತ್ತೆ ಹಾರಾಡಿದ ಭಗವಾಧ್ವಜ   https://fb.watch/qCurdAIGWZ/?mibextid=Nif5oz