ಭಟ್ಕಳ : ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿ ಗಾಯಗೊಂಡ ಘಟನೆ ಶಹರದ ಸಂಶುದ್ದೀನ್ ವೃತ್ತದ ಬಳಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ

ಭಟ್ಕಳದ ಹುರುಳಿಸಾಲ ನಾಗಜಟಗಾ ದೇವಸ್ಥಾನ ಹತ್ತಿರದ ನಿವಾಸಿ ಪೂರ್ಣಿಮಾ ಗಣೇಶ ಪೂಜಾರಿ(೫೨) ಗಾಯಗೊಂಡವರು. ತಲೆಯ ಎಡಬದಿಗೆ, ಕಿವಿಯ ಮೇಲ್ಗಡೆ, ಎಡಕೈ ಮತ್ತು ಎಡಕಾಲುಗಳಿಗೆ ಗಾಯಗಳಾಗಿವೆ. ಭಟ್ಕಳ ಸಂಶುದ್ದೀನ್ ವೃತ್ತದ ಹತ್ತಿರ ಅಣ್ಣಪ್ಪ ಅಂಗಡಿ ಎದುರುಗಡೆ ಘಟನೆ ನಡೆದಿದೆ. ಸಾಗರ ರಸ್ತೆಯಿಂದ ಬಂದು ರಾಹೆ-೬೬ರ ಎಡಬದಿಯಿಂದ ಹೊಸ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರು ಡಿಕ್ಕಿಯಾಗಿದೆ.

ಇದನ್ನೂ ಓದಿ : ಜುಲೈ ೧೨ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ

ಈ ಕುರಿತು ಕಾರು ಚಾಲಕ ಅಂಕೋಲಾದ ಅಜಯ ಶಂಕರ ಹುಲಸ್ವಾರ ವಿರುದ್ದ ದೂರು ದಾಖಲಾಗಿದೆ. ಹೊನ್ನಾವರ ಕಡೆಯಿಂದ ಕುಂದಾಫುರ ಕಡೆಗೆ ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ಕಾರು ಚಲಾಯಿಸಿ ಅಪಘಾತಪಡಿಸಿದ್ದಾಗಿ ಗಾಯಾಳು ಮಗಳು ಶ್ವೇತಾ ದೂರು ದಾಖಲಿಸಿದ್ದಾರೆ. ಶಹರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.