ಭಟ್ಕಳ: ಪಾಲಕರು ತಮ್ಮ ಮಕ್ಕಳ ಜೊತೆಗೂಡಿ ದಿನನಿತ್ಯದ ಸಾಮಾನು ಖರೀದಿಗೆ ತೆರಳಬೇಕು. ಇದರಿಂದಾಗಿ ಕೊಳ್ಳುತಕ್ಕೊಳ್ಳುವಿಕೆಯ ಜ್ಞಾನ ಮಕ್ಕಳಿಗೂ ಲಭಿಸುತ್ತದೆ ಎಂದು ಉದ್ಯಮಿ ವಿನೋದ ಬಡಾಳ ಹೇಳಿದರು. ಅವರು ಸೋಮವಾರ ಭಟ್ಕಳ ತಾಲೂಕಿನ ಮಣ್ಕುಳಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆ (Makkala Santhe) ಉದ್ಘಾಟಿಸಿ ಮಾತನಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಇನ್ನೋರ್ವ ಉದ್ಯಮಿ ಅಚ್ಯುತ್ ಕಾಮತ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಉತ್ತಮ ಸಾಧನೆ ಮಾಡಿ ತೋರಿಸಿದ್ದಾರೆ. ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವುದರ ಜೊತೆಗ ಓದಿನಲ್ಲಿ ಆಸಕ್ತಿ ತೋರುವ ವಿದ್ಯಾರ್ಥಿ ಯಾವ ಶಾಲೆಯಲ್ಲಿದ್ದರೂ ಸಾಧನೆ ಮಾಡುತ್ತಾರೆ ಎಂದರು.
Bike theft/ ಅಳ್ವೆಕೋಡಿ ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ
ಪತ್ರಕರ್ತ ಮೋಹನ ನಾಯ್ಕ ಮಾತನಾಡಿ, ಕಾನ್ವೆಂಟ್ ಶಾಲೆಯ ಮಕ್ಕಳ ಹಾಗೆ ಸರ್ಕಾರಿ ಶಾಲೆಯ ಮಕ್ಕಳಿಗೆ ಬಂಧನದ ಸಂಕೋಲೆ ಇರುವುದಿಲ್ಲ. ಸರ್ಕಾರಿ ಶಾಲೆಯ ಮಕ್ಕಳಿಗೆ ಶಾಲಾ ಚಟುವಟಿಕೆಯ ಜೊತೆಗೆ ಸಮುದಾಯ ಚಟುವಟಿಕೆಗಳಲ್ಲೂ ಸಕ್ರೀಯರಾಗಿ ಪಾಲ್ಗೊಳ್ಳುವ ಸ್ವಾತಂತ್ರ್ಯ ಇರುತ್ತದೆ ಎಂದರು.
Arrested/ ಮಲ್ನಾಡು ಗಿಡ್ಡ ತಳಿಯ ಆಕಳ ಹತ್ಯೆ ಮಾಡಿದ ಅಪ್ರಾಪ್ತ ಬಂಧನ
ಬಿ.ಆರ್.ಸಿ. ಗೋಪಾಲ ನಾಯ್ಕ, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಎಂ ಎಸ್ ನಾಯ್ಕ ಮಾತನಾಡಿದರು. ಪುರಸಭೆ ಸದಸ್ಯರಾದ ಸುರೇಶ ನಾಯ್ಕ, ನಾಗರಾಜ ನಾಯ್ಕ, ಪ್ರಮುಖರಾದ ನಾಗೇಶ ನಾಯ್ಕ, ರಾಜೇಶ ನಾಯ್ಕ, ಸುಧಾಕರ ನಾಯ್ಕ, ಪಾಂಡುರಂಗ ನಾಯ್ಕ, ಪ್ರಮೋದ ಬಡಾಳ, ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ರಮೇಶ ನಾಯ್ಕ, ಮುಖ್ಯ ಶಿಕ್ಷಕಿ ವನಜಾಕ್ಷಿ ಇದ್ದರು. ಮಕ್ಕಳ ಸಂತೆಗೆ (Makkala Santhe) ಭೇಟಿ ನೀಡಿದ ವಿದ್ಯಾರ್ಥಿಗಳ ಪಾಲಕರು, ಸಾರ್ವಜನಿಕರು ಮಕ್ಕಳಿಂದ ವಿವಿಧ ಬಗೆಬಗೆಯ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡಿ ಖುಷಿಪಟ್ಟರು.
Arudha Shri/ ಬಸವನ ಬಾಗೇವಾಡಿಯಲ್ಲಿ ಉಮೇಶ ಮುಂಡಳ್ಳಿಗೆ ‘ಆರೂಢ ಶ್ರೀ’ ಪ್ರದಾನ



