ಭಟ್ಕಳ: ತಾಲೂಕಿನ ಶಿರಾಲಿಯ ತಟ್ಟಿಹಕ್ಕಲ್ ಮೈದಾನದಲ್ಲಿ ಭಟ್ಕಳ ನಾಮಧಾರಿ ಸಮಾಜ ಬಾಂಧವರಿಂದ ಆಯೋಜಿಸಲ್ಪಟ್ಟ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಎನ್.ಪಿ.ಎಲ್ -2024 ಆರಂಭಗೊಂಡಿದೆ.
ಉದ್ಘಟನಾ ಕಾರ್ಯಕ್ರಮದ ವಿಡಿಯೋ ವರದಿ ನೋಡಿ : https://fb.watch/qpaJVmlcEo/?mibextid=Nif5oz
ನಿಚ್ಛಲಮಕ್ಕಿ ತಿರುಮಲ ವೆಂಕರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ ದೀಪ ಬೆಳಗಿಸುವುದರ ಮೂಲಕ ಪಂದ್ಯಾವಳಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಸಾರದಹೊಳೆ ಹಾಗೂ ಭಟ್ಕಳ ನಾಮಧಾರಿ ಸಮಾಜ ಜಂಟಿಯಾಗಿ ಈ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿದೆ. ಈ ಪಂದ್ಯಾವಳಿ 3 ದಿನಗಳ ಕಾಲ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು. ಮುಂದಿನ ವರ್ಷದ ಪಂದ್ಯಾವಳಿಯಲ್ಲಿ ಪ್ರಥಮ, ದ್ವಿತೀಯ ಟ್ರೋಫಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ತಾವೇ ಭರಿಸುವುದಾಗಿ ಘೋಷಣೆ ಮಾಡಿದರು.
ಇದನ್ನೂ ಓದಿ : ಸಾಗರ: ಅಪಘಾತಕ್ಕೆ ಒಳಗಾದ ವ್ಯಕ್ತಿಗೆ ನೆರವಾದ ಶಾಸಕ ಬೇಳೂರು
ಸಮಾಜಕ್ಕೆ ಅನ್ಯಾಯವಾದಾಗ ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಸುಬ್ರಾಯ ನಾಯ್ಕ ಕರೆ ನೀಡಿದರು.
ಪಂದ್ಯಾವಳಿಯ ಲೈವ್ ಸ್ಕೋರ್ ನೋಡಿ: https://cricheroes.com/tournament/922583/Namdhari-Premier-League-2024-(Season-1)/matches/live-matches
ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಗೌರವಾಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ ಮಾತನಾಡಿ, ಸಮಾಜದ ಸಂಘಟನೆಯಲ್ಲಿ ರಾಜಕೀಯ ಬೆರೆಸುವುದು ಬೇಡ. ಪ್ರತಿಯೊಬ್ಬರೂ ಸಂಘಟನೆಗೆ ಆರ್ಥಿಕವಾಗಿ ನೆರವಾದರೆ ಸಮಾಜದ ಪ್ರತಿಭಾವಂತರನ್ನು ಪ್ರೋತ್ಸಾಹಿಸಲು ಸಾಧ್ಯ ಎಂದರು.
ನಿವೃತ್ತ ಯೋಧ ಶ್ರೀಕಾಂತ ನಾಯ್ಕ ಆಸರಕೇರಿ ಮಾತನಾಡಿ, ಈ ಪಂದ್ಯಾವಳಿಯ ಮೂಲಕ ಸಮಾಜದ ಸಂಘಟನೆ ಇನ್ನಷ್ಟು ಬಲಗೊಳ್ಳಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಮುಖರಾದ ಭವಾನಿಶಂಕರ ನಾಯ್ಕ ಮಾತನಾಡಿದರು. ಭಟ್ಕಳ ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಎಂ.ಕೆ.ನಾಯ್ಕ, ಕಾರ್ಯದರ್ಶಿ ಡಿ.ಎಲ್.ನಾಯ್ಕ, ಸ್ಪಂದನ ಸಂಸ್ಥೆಯ ರಾಘವೇಂದ್ರ ನಾಯ್ಕ, ಬ್ರಹ್ಮಶ್ರೀ ನಾರಾಯಣ ಗುರು ಸಂಘಟನೆಯ ಸಂಚಾಲಕ ಮನಮೋಹನ ನಾಯ್ಕ, ಪ್ರಮುಖರಾದ ಮಹಾಬಲೇಶ್ವರ ನಾಯ್ಕ, ಪ್ರಕಾಶ ನಾಯ್ಕ, ಮಹೇಶ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ಶಿವಾನಂದ ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಮೇಶ್ವರ ನಾಯ್ಕ ಹಾಗೂ ನಾರಾಯಣ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಅತಿಥಿ ಗಣ್ಯರು ಬ್ಯಾಟಿಂಗ್ ಮತ್ತು ಬಾಲಿಂಗ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು.
ಇದಕ್ಕೂ ಪೂರ್ವದಲ್ಲಿ ಸಾರದಹೊಳೆ ಶ್ರೀ ಹಳೆಕೋಟೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಬಳಿಕ ಅಲ್ಲಿಂದ 8 ತಂಡದ ಮಾಲೀಕರು ಹಾಗೂ ಆಟಗಾರರು ಬೈಕ್ ರ್ಯಾಲಿ ಮೂಲಕ ಶಿರಾಲಿ ತಟ್ಟಿಹಕ್ಕಲ್ ಮೈದಾನಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಚಂಡೆ ವಾದ್ಯಗಳ ಮೂಲಕ ಆಟಗಾರರನ್ನು ಸ್ವಾಗತಿಸಲಾಯಿತು.