ಭಟ್ಕಳ: ತೆಂಗಿನಗುಂಡಿ ಬಂದರು ಸಮೀಪವಿರುವ ಆಲದ ಮರದಲ್ಲಿ ವ್ಯಕ್ತಿಯೋರ್ವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಇದನ್ನೂ ಓದಿ : ಬ್ಯಾಂಕಿಗೆ ಕನ್ನ ಹಾಕಿದ ಇಬ್ಬರು ಯುವಕರು

ಮೃತ ವ್ಯಕ್ತಿಯನ್ನು ಲಕ್ಷ್ಮಣ ನಾರಾಯಣ ನಾಯ್ಕ (40) ಎಂದು ಗುರುತಿಸಲಾಗಿದೆ. ಈತ ತೆಂಗಿನಗುಂಡಿ ಹೆಬಳೆ ನಿವಾಸಿ ಆಟೋ ಚಾಲಕ ಎಂದು ತಿಳಿದು ಬಂದಿದೆ. ಈತ ಬುಧವಾರ ರಾತ್ರಿ 8 ಗಂಟೆಗೆ ತನ್ನ ಅಟೋ ತೆಗೆದುಕೊಂಡು ಮನೆಯಿಂದ ಹೋಗಿದ್ದ. ರಾತ್ರಿ ಮರಳಿ ಮನೆಗೆ ಬಂದಿಲ್ಲ. ಗುರುವಾರ ಬೆಳಿಗ್ಗೆ ದಯಾನಂದ ವೆಂಕಟರಮಣ ನಾಯ್ಕ ಎನ್ನುವವರು ಮೃತನ ಸಹೋದರ ಕೃಷ್ಣ ನಾಯ್ಕರಿಗೆ ಕರೆ ಮಾಡಿ ಸಾವಿನ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಹೋಗಿ ನೋಡಿದರೆ ಲಕ್ಷ್ಮಣ ನಾಯ್ಕ ತೆಂಗಿನಗುಂಡಿ ಬಂದರಿನಲ್ಲಿ ಇರುವ ಆಲದ ಮರದ ಟೊಂಗೆಗೆ ಹಗ್ಗವನ್ನು ಕಟ್ಟಿಕೊಂಡು ತನ್ನ ಕುತ್ತಿಗೆಗೆ ನೇಣು ಹಾಕಿ ಸಾವನ್ನಪ್ಪಿರುವುದು ನೋಡಿದ್ದಾರೆ.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್  ಫಾಲೋವ್ ಮಾಡಲು ಇಲ್ಲಿ ಒತ್ತಿ.

ನೇಣು ಬಿಗಿದ ಸ್ಥಿತಿಯಲ್ಲಿ ಈ ಆಟೋ ಚಾಲಕನ ಮೃತದೇಹ ಕಂಡು ಸಾವಿನಲ್ಲಿ ಸಂಶಯವಿರುವ ಬಗ್ಗೆ ಮೃತನ ಸಹೋದರ ಕೃಷ್ಣ ನಾಯ್ಕ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗ್ರಾಮೀಣ ಠಾಣೆ ಪಿ.ಎಸ್.ಐ. ಮಯೂರ ಪಟ್ಟಣಶೆಟ್ಟಿ ತನಿಖೆ ಕೈಗೊಂಡಿದ್ದಾರೆ.