ಭಟ್ಕಳ : ಪ್ರಜ್ಞೆ ತಪ್ಪಿ ಬಿದ್ದ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟ ಘಟನೆ ತಾಲೂಕಿನ ಮುರುಡೇಶ್ವರದಲ್ಲಿ ಜೂ. ೨೯ರ ಶನಿವಾರ ರಾತ್ರಿ ನಡೆದಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮುರ್ಡೇಶ್ವರದ ಸೋನಾರಕೇರಿ ನಿವಾಸಿ ಕೃಷ್ಣ ಸುಕ್ರ ನಾಯ್ಕ(೩೭) ಮೃತ ವ್ಯಕ್ತಿ. ಇವರು ಮುರ್ಡೇಶ್ವರದ ಸೋನಾರಕೇರಿಯಲ್ಲಿ ತಮ್ಮ ಹೆಂಡತಿ ಲೀಲಾ ಹಾಗೂ ಮಗನೊಂದಿಗೆ ಕೂಲಿ ಕೆಲಸ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದರು. ಜೂ.೨೯ರ ರಾತ್ರಿ ೮ರ ಸುಮಾರಿಗೆ ಮುರ್ಡೇಶ್ವರದ ವೈನ್ ಶಾಪ್ ಹತ್ತಿರ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಅವರನ್ನು ೧೦೮ ಅಂಬುಲೆನ್ಸ್ ವಾಹನದಲ್ಲಿ ಅವರ ಹೆಂಡತಿ ಲೀಲಾ ಹಾಗೂ ಮಗ ಚಂದನ ಭಟ್ಕಳದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಆಸ್ಪತ್ರೆಗೆ ತಲಪುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ : ವಿದ್ಯಾರ್ಥಿಗಳು ನಾಡು ನುಡಿ ಅಭಿಮಾನವನ್ನು ಬೆಳೆಸಿಕೊಳ್ಳಬೇಕು : ಡಾ.ಪುಷ್ಪಲತಾ
ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಮೃತನ ಸಹೋದರ, ಬಸ್ತಿ ಎಣ್ಣೆಬೊಳೆ ನಿವಾಸಿ ಮಂಜಪ್ಪ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.