ಭಟ್ಕಳ : ಪ್ರತಿಭಾವಂತ ವಿದ್ಯಾರ್ಥಿ ಅನಂತ ನಾಗರಾಜ ಹೆಬ್ಬಾರ (15) ಕಳೆದ ಡಿಸೆಂಬರ್ 15 ರಂದು ರಾತ್ರಿ ತನ್ನ ಮನೆಯ ಬಚ್ಚಲು ಒಲೆಗೆ (ಬೊಯ್ಲರ್) ಬೆಂಕಿ ಹಿಡಿಸುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಗಂಭೀರವಾಗಿ ಸುಟ್ಟುಕೊಂಡು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಐಸಿವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಭಟ್ಕಳದ ಮಾರುಕೇರಿಯ ಕೋಟಖಂಡದ ಎಸ್ಸೆಸ್ಸೆಲ್ಸಿಯುಲ್ಲಿ ಓದುತ್ತಿದ್ದ ಈತನಿಗೆ ಶೇ. 56 ರಷ್ಟು ಸುಟ್ಟ ಗಾಯವಾಗಿದೆ. 12ಕ್ಕೂ ಅಧಿಕ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ವಿಪರ್ಯಾಸವೆಂದರೆ ಈತನಿಗೆ ಎರಡೂ ಕಣ್ಣಿನ ದೃಷ್ಟಿದೋಷ ಉಂಟಾಗಿದೆ. ಮತ್ತಷ್ಟು ದಿನ ಈತ ಐಸಿಯುವಿನಲ್ಲೇ ಚಿಕಿತ್ಸೆ ಪಡೆಯಬೇಕಾದ ಅನಿವಾಯರ್ಯತೆ ಇದೆ.
ಇದನ್ನೂ ಓದಿ : ರಂಗಭೂಮಿ ಕಲಾವಿದರು ಕಲಾತಪಸ್ವಿಗಳು : ಡಾ.ಸಯ್ಯದ್ ಝಮೀರುಲ್ಲ ಷರೀಫ್
ಈಗಾಗಲೇ ಈತನ ಚಿಕಿತ್ಸೆಗೆ 20 ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಮತ್ತಷ್ಟು ಚಿಕಿತ್ಸೆಗೆ ಮತ್ತೆ 20 ಲಕ್ಷಕ್ಕೂ ಅಧಿಕ ಹಣ ಅಗತ್ಯವಿದೆ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆಯಂತೆ ಅನಂತನ ಚಿಕಿತ್ಸೆಗೆ ಸಹೃದಯಿಗಳು ಕೈಲಾದಷ್ಟು ಮಟ್ಟಿಗೆ ನೆರವು ನೀಡಿ ಆತ ಗುಣ ಆಗಿ ಮನೆಗೆ ಬರಲು ಮಾನವೀಯತೆ ತೋರಬೇಕಿದೆ.
ಮಗು ಅಳುತ್ತದೆ ಎಂದು ಗೋಡೆಗೆ ಎಸೆದ ಪಾಪಿ ತಂದೆ
ಈ ಕುರಿತು ಹೆಚ್ಚಿನ ಮಾಹಿತಿಗೆ ಮೊ.ಸಂಖ್ಯೆ : ೮೬೬೦೭೨೮೧೩೯ ಸಂಪರ್ಕಿಸಬಹುದು. ಅನಂತನ ಚಿಕಿತ್ಸೆಗೆ ಕೆನರಾ ಬ್ಯಾಂಕ್, ಭಟ್ಕಳ ಶಾಖೆ ಎಸ್ ಬಿ ನಂ: 03052200095295, ಐಎಪ್ಎಸ್ಸಿ ಕೋಡ್ : CNRB0010305 ಗೆ ಧನ ಸಹಾಯ ಮಾಡುವುದರ ಮೂಲಕ ನೆರವು ನೀಡಬಹುದು.
ಈ ವಿಡಿಯೋ ನೋಡಿ : ಸರ್ಕಾರಿ ನೌಕರರ ವಾಲಿಬಾಲ್ ಪಂದ್ಯಾವಳಿ https://fb.watch/qv-S5IDNK1/?mibextid=Nif5oz