ಭಟ್ಕಳ: ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವಾರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಅರಬ್ ರಾಷ್ಟ್ರಗಳಲ್ಲಿ ನೆಲೆಸಿರುವ ಭಟ್ಕಳಿಗರಿಗೆ ಫ್ರೀ ಟಿಕೇಟ್ ಆಫರ್ ಲಭಿಸಿದೆ. ಮತದಾನ ಮಾಡಲು ಭಟ್ಕಳಕ್ಕೆ ತೆರಳಲು ಇಚ್ಛಿಸಿದ್ದಲ್ಲಿ ವಿಮಾನದ ಟಿಕೇಟ್ ವೆಚ್ಚ ಭರಿಸಲು ಸೌದಿಅರೇಬಿಯಾದಲ್ಲಿನ ವಿವಿಧ ಮುಸ್ಲಿಮ್ ಜಮಾತ್‌ಗಳು ಮುಂದಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಸೌದಿ ಅರೇಬಿಯಾದ ರಿಯಾದ್‌ನಲ್ಲಿ 150ಕ್ಕೂ ಹೆಚ್ಚು ಭಟ್ಕಳಿಗರಿದ್ದಾರೆ. ದಮ್ಮಾಮ್‌ನಲ್ಲಿ ಸುಮಾರು 500 ಭಟ್ಕಳಿಗರು ನೆಲೆಸಿದ್ದಾರೆ. ಜಿದ್ದಾದಲ್ಲಿಯೂ ಭಟ್ಕಳದ ಮತದಾರರ ಸಂಖ್ಯೆ 500 ದಾಟಿದೆ. ಯಾವುದೇ ಕಾರಣದಿಂದ ಮತದಾನದ ಪ್ರಮಾಣ ಕಡಿಮೆಯಾಗಬಾರದು ಎಂದು ನಿರ್ಧರಿಸಿರುವ ಮುಸ್ಲಿಮ್ ಜಮಾತ್‌ಗಳು ಉಚಿತ ಟಿಕೇಟ್ ಆಫರ್ ನೀಡಿವೆ.
ಇದನ್ನೂ ಓದಿ : ಕ್ಯಾಂಪಸ್ ಸಂದರ್ಶನದಲ್ಲಿ ೧೫ ವಿದ್ಯಾರ್ಥಿಗಳು ಆಯ್ಕೆ
ಸೌದಿಅರೇಬಿಯಾದ ಭಟ್ಕಳ ಮುಸ್ಲಿಮ್ ಸಂಘಟನೆಗಳ ನಿರ್ಧಾರದಿಂದ ದುಬೈನಲ್ಲಿರುವ ಭಟ್ಕಳ ಮುಸ್ಲಿಮ್ ಜಮಾತ್‌ಗಳು ಕೂಡ ಉತ್ತೇಜನಗೊಂಡಿವೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ತನ್ನ ಸದಸ್ಯರಿಗೆ, ಫ್ರೀ ಟಿಕೇಟ್ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿವೆ.
ಭಾರತದಲ್ಲಿ ಮಹತ್ವದ ಚುನಾವಣೆ ನಡೆಯುತ್ತಿದೆ. ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಟ್ಕಳದ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಅಲ್ಲದೇ ಮನುಷ್ಯತ್ವದ ಬಗ್ಗೆ ಕಾಳಜಿ ಇರುವ ಜ್ಯಾತ್ಯತೀತ ವ್ಯಕ್ತಿ, ಪಕ್ಷಗಳ ಪರವಾಗಿ ಮತದಾನ ಮಾಡಬೇಕು ಎಂದು ಮುಖಂಡರು ಮತದಾರರನ್ನು ವಿನಂತಿಸಿಕೊಂಡಿವೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.