ಗೋಕರ್ಣ: ಉತ್ತರ ಕನ್ನಡದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಯನ್ನ ಅನೇಕರು ಒಪ್ಪುತ್ತಿಲ್ಲ. ಹಲವರಿಗೆ ಬಿಜೆಪಿ ಅಭ್ಯರ್ಥಿಯೇ ಇಷ್ಟವಿಲ್ಲ. ಹೀಗಾಗಿ ಬಿಜೆಪಿ – ಜೆಡಿಎಸ್ ಈ ಎರಡೂ ಪಕ್ಷದವರು ನಮಗೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

ಇದನ್ನೂ ಓದಿ : ಮತಗಟ್ಟೆ ಸಿಬ್ಬಂದಿಗೆ ವಿಶೇಷ ಕಿಟ್ !

ಗೋಕರ್ಣದ ಜಿ.ಪಂ. ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿಯವರ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರೊಂದಿಗೆ ಮಾತನಾಡಿದ ಅವರು, ಸ್ತ್ರೀರೋಗ ತಜ್ಞೆಯಾಗಿ ದಶಕಗಳ ಕಾಲ ಸೇವೆ ಸಲ್ಲಿಸಿ ಮಹಿಳೆಯರ ಕಷ್ಟವನ್ನ ಅರಿತಿದ್ದೇನೆ. ಜನ ಸೇವೆಗಾಗಿ ರಾಜಕೀಯ ಕ್ಷೇತ್ರ ಪ್ರವೇಶಿಸಿ ಖಾನಾಪುರದ ಇತಿಹಾಸದಲ್ಲಿ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದೆ. ಉತ್ತರಕನ್ನಡ ಕ್ಷೇತ್ರದಲ್ಲಿ ಹಲವು ಸಮುದಾಯಗಳ ಜನ ಇದ್ದಾರೆ. ಎಲ್ಲಾ ಸಮುದಾಯದ ಕಷ್ಟ- ಸುಖಗಳನ್ನೂ ನಾನು ಅರಿತಿದ್ದೇನೆ ಎಂದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ಮಾತನಾಡಿ, ಚುನಾವಣಾ ಪೂರ್ವ ಮಾತು ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿ ತೋರಿಸಿದ್ದೇವೆ. ಅದರ ಮೇಲೇ ನಾವು ಮತ ಕೇಳಬೇಕಿದೆ. ಬಿಜೆಪಿ ಮುಖಂಡರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆ ತಮ್ಮದೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗಾಗಿ ಬಿಜೆಪಿಯ ಈ ಅಪಪ್ರಚಾರದ ಬಗ್ಗೆಯೂ ಮಾತನಾಡಬೇಕಿದೆ ಎಂದರು.

ಇದನ್ನೂ ಓದಿ : ಯುಗಾದಿ, ರಮಜಾನ್ ಪ್ರಯುಕ್ತ ಹೆಚ್ಚುವರಿ ಬಸ್ ಸಂಚಾರ

ಕುಮಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ್ ಮಾತನಾಡಿ, ಈ ಬಾರಿ ಅವಕಾಶ ಕಳೆದುಕೊಂಡರೆ ಮತ್ತೆ ಸಿಗಲಿಕ್ಕಿಲ್ಲ. ವಿಧಾನಸಭಾ ಚುನಾವಣೆಯಲ್ಲಿನ ವ್ಯತ್ಯಾಸ ಏನೇ ಇರಬಹುದು. ಆದರೆ ದೇಶ, ರಾಜ್ಯದಲ್ಲಿ ಈಗ ಕಾಂಗ್ರೆಸ್ ಪರ ಅಲೆ ಇದೆ. ಗ್ಯಾರಂಟಿ ಯೋಜನೆಯನ್ನ ಚುನಾವಣಾ ಪೂರ್ವ ಘೋಷಣೆ ಮಾಡಿದಂತೆ ಅನುಷ್ಠಾನ ಮಾಡಿದ್ದೇವೆ. ಹೀಗಾಗಿ ಈಗ ಪ್ರಚಾರಕ್ಕೆ ತೆರಳಲು ಅಂಜಬಾರದು. ನಮ್ಮ ಕುಟುಂಬದವರೇ ಅಭ್ಯರ್ಥಿಯಾಗಿ ನಿಂತಿದ್ದಾರೆಂದು ಕಾರ್ಯಕರ್ತರು ಪ್ರಚಾರ ಮಾಡಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ : ಯುಗಾದಿ, ರಮಜಾನ್ ಪ್ರಯುಕ್ತ ಹೆಚ್ಚುವರಿ ಬಸ್ ಸಂಚಾರ

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪ್ರದೀಪ್ ನಾಯಕ ದೇವರಬಾವಿ ಮಾತನಾಡಿ, ಆರು ಬಾರಿ ಆಯ್ಕೆಯಾದರೂ ಸಂಸದ ಅನಂತಕುಮಾರ್ ಹೆಗಡೆ ಒಂದೇ ಒಂದು ಸ್ಥಳೀಯ ಕಾರ್ಯಕ್ರಮಗಳಿಗೆ ಹಾಜರಾಗಿದ್ದನ್ನ ನಾವು ನೋಡಿಲ್ಲ. ತೊರ್ಕೆ ಪಂಚಾಯತ ವ್ಯಾಪ್ತಿಯಲ್ಲಿ ಒಂದೇ ಒಂದು ಕಾಮಗಾರಿ ೩೦ ವರ್ಷಗಳಲ್ಲಿ ಬಂದಿದ್ದರೆ ನಾನು ರಾಜಕೀಯ ರಾಜೀನಾಮೆ ನೀಡುವೆ ಎಂದರು.

ಇದನ್ನೂ ಓದಿ : ನಾಮಪತ್ರ ಸಲ್ಲಿಕೆ ೧೨ರಿಂದ : ೨೨ರವರೆಗೆ ನಿಷೇಧಾಜ್ಞೆ

ಈ ವೇಳೆ ವಿವಿಧ ಗ್ರಾಮ ಪಂಚಾಯತಿಗಳ ಪ್ರತಿನಿಧಿಗಳು, ಮೀನುಗಾರ ಪ್ರಮುಖರು, ಮಹಿಳೆಯರು, ಯುವಕರು ಸೇರಿದಂತೆ ನೂರಾರು ಕಾರ್ಯಕರ್ತರು ಸೇರಿದ್ದರು.