ಭಟ್ಕಳ: ಹಿಂದುಳಿದ ವರ್ಗಗಳ ನೈಜ ನಾಯಕ ನರೇಂದ್ರ ಮೋದಿಯಿಂದ ಸಶಕ್ತ, ಸಮೃದ್ಧ ಮತ್ತು ಸುಭಿಕ್ಷ ದೇಶದ ನಿರಂತರತೆಯೇ ಮತದಾರ ನಂಬಿರುವ ಗ್ಯಾರಂಟಿ ಎಂದು ಬಿ.ಜೆ.ಪಿ. ರಾಜ್ಯ ಹಿಂದುಳಿದ ಮೋರ್ಚಾ ಉಪಾಧ್ಯಕ್ಷ ಈಶ್ವರ ಎನ್ ನಾಯ್ಕ ಹೇಳಿದ್ದಾರೆ.

ಇದನ್ನೂ ಓದಿ : ಡಾ.ಅಂಜಲಿ ವಿರುದ್ಧ ಸುಬ್ರಾಯ ದೇವಡಿಗ ಗರಂ

ಈ ಕುರಿತು ಲಿಖಿತ ಹೇಳಿಕೆ ನೀಡಿರುವ ಅವರು, ಕಳೆದ ಹತ್ತು ವರ್ಷಗಳ ಮೋದಿ ಆಡಳಿತ ಮತ್ತು ಹಿಂದಿನ ಹತ್ತು ವರ್ಷಗಳ ಕಾಂಗ್ರೆಸ್ ಆಡಳಿತ ನೋಡಿರುವ ಪ್ರಬುದ್ಧ ಮತದಾರ ಈ ಬಾರಿ ಕಾಂಗ್ರೆಸ್ ಗ್ಯಾರಂಟಿಯ ಭರವಸೆಯನ್ನು ನಂಬಿ ಮತದಾನ ಮಾಡಲು ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದ ಚೊಂಬು ಮತ್ತು ಮಕ್ಮಲ್ ಟೋಪಿಯ ಜಾಹೀರಾತು ನೋಡಿ ಬಿಜೆಪಿ ಸರ್ಕಾರ ಮಾಡಿದ ಸಾಧನೆಗಳನ್ನು ಮರೆತು ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕುತ್ತಾರೆಂಬ ಭ್ರಮಾನಿರತ ಸ್ಥಿತಿ ಕಾಂಗ್ರೆಸ್ ಪಕ್ಷದವರದ್ದಾಗಿದೆ. ಮೋದಿ ಏಕೆ ಬೇಕು ಎನ್ನುವುದಕ್ಕೆ ಈ ಹಿಂದೆಯೂ ಮತದಾರ ಪವಿತ್ರ ವೋಟ್ ಮಾಡುವ ಮೂಲಕ ದೇಶವನ್ನು ದೂರಗಾಮಿ ಚಿಂತನೆಯ ಮೂಲಕ ನಿರ್ಧರಿಸಿದ್ದು ಕಾಂಗ್ರೆಸ್ ಮರೆತಂತಿದೆ ಎಂದಿದ್ದಾರೆ.

ಇದನ್ನೂ ಓದಿ : ರಾಹುಲ್ ಗಾಂಧಿ ಅವರದ್ದು ಹುಸಿ ಭರವಸೆ: ಸುನೀಲ ನಾಯ್ಕ

ಮತದಾರ ಅಲಕ್ಷಿಸಿದರೆ ಮತ್ತು ದೇಶದ್ರೋಹಿ ಮನಃಸ್ಥಿತಿಯವರನ್ನು ಅಧಿಕಾರಕ್ಕೆ ತಂದರೆ ನಾಳೆ ಭಾರತವೂ ಇನ್ನೊಂದು ಇಂಡೋನೇಷ್ಯಾ ಆಗುವ ಅಪಾಯ ಇದೆ ಎನ್ನುವುದು ಮತದಾರನಿಗೆ ಅರ್ಥವಾಗಿದೆ. ೫೦೦ ವರ್ಷಗಳ ಪರಿಶ್ರಮದ ಪ್ರತಿಫಲ ಶ್ರೀರಾಮನ ಭವ್ಯ ಮಂದಿರ. ಈ ವಿಷಯವಾಗಿ ಕಾಂಗ್ರೆಸ್ ಪಕ್ಷದ ದ್ವಿಮುಖ ಧೋರಣೆ ಮತದಾರನಿಗೆ ಮನವರಿಕೆಯಾಗಿದೆ. ಬಿಜೆಪಿ ಸರ್ಕಾರ ಬೇಕು ಎಂಬ ಮನಸ್ಸು ಮಾಡಿರುವುದು ಸ್ಪಷ್ಟವಾಗಿದೆ. ೬೦ ವರ್ಷ ದೇಶ ಆಳಿದವರಿಂದ ಆದ ದೇಶದ ಪ್ರಗತಿ ಎಷ್ಟು ಮತ್ತು ಕಳೆದ ಹತ್ತು ವರ್ಷಗಳಲ್ಲಿ ಆಗಿರುವ ಪ್ರಗತಿ ಎಷ್ಟು ಎಂದು ಅಳೆದು ನೋಡಿದರೆ ಮತದಾರನಿಗೆ ವ್ಯತ್ಯಾಸ ತನ್ನಿಂದ ತಾನೇ ಗೋಚರವಾಗುತ್ತದೆ. ಕಾಂಗ್ರೆಸ್ಸಿನವರಿಗೆ ಹೇಗಾದರೂ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಬೇಕೆನ್ನುವ ಪರಮ ಧ್ಯೇಯವಾಗಿದೆ. ಉತ್ತರ ಕನ್ನಡದ ಲೋಕಸಭಾ ಕ್ಷೇತ್ರದ ಮತದಾರ ಈ ಬಾರಿಯೂ ಬಿಜೆಪಿ ಪಕ್ಷಕ್ಕೆ ಮತ ಹಾಕುತ್ತಾರೆ. ಸಜ್ಜನ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭೂತಪೂರ್ವ ದಾಖಲೆಯ ಮತದೊಂದಿಗೆ ಆಯ್ಕೆ ಮಾಡುತ್ತಾರೆ ಎಂಬ ಗ್ಯಾರಂಟಿ ಮತದಾರ ನೀಡುತ್ತಿದ್ದಾರೆ ಎಂದು ಈಶ್ವರ ನಾಯ್ಕ ಸಂತಸ ವ್ಯಕ್ತಪಡಿಸಿದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.