ಭಟ್ಕಳ: ಮಹಾಶಿವರಾತ್ರಿ (Mahashivratri) ಪ್ರಯುಕ್ತ ತಾಲೂಕಿನಿಂದ ಸಾವಿರಾರು ಶಿವಭಕ್ತರು ವಿಶ್ವ ಪ್ರಸಿದ್ಧ ಮುರುಡೇಶ್ವರದ (murudeshwara) ಶಿವನ ದೇಗುಲಕ್ಕೆ ಬರಿಗಾಲಿನಲ್ಲಿ ಸುಮಾರು ೧೮ ಕಿಲೋ ಮೀಟರ್ ಪಾದಯಾತ್ರೆ (Padayatre) ನಡೆಸಿದರು. ನಸುಕಿನ ಜಾವದಿಂದಲೇ ‘ಓಂ ನಮಃ ಶಿವಾಯ’ ಘೋಷಣೆಗಳ ನಡುವೆ ಭಕ್ತರು ಮುರುಡೇಶ್ವರದತ್ತ ಹೆಜ್ಜೆ ಹಾಕಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ತಹಶೀಲ್ದಾರ ನಾಗ್ರೇಂದ್ರ ಕೋಳ ಶೆಟ್ಟಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಬೆಳಗಿನ ನಾಲ್ಕು ಗಂಟೆ ಸುಮಾರಿಗೆ ಭಟ್ಕಳದಿಂದ ಪಾದಯಾತ್ರೆ (Padayatre) ಆರಂಭಿಸಿ, ಏಳು ಗಂಟೆ ವೇಳೆಗೆ ಶಿವನ ಪಂಚಕ್ಷೇತ್ರಗಳಲ್ಲಿ ಒಂದಾದ ಮುರುಡೇಶ್ವರ ದೇವಸ್ಥಾನಕ್ಕೆ ತಲುಪಿ ದೇವರ ದರ್ಶನ ಪಡೆದರು. ಅಧಿಕಾರಿಗಳ ಈ ಧಾರ್ಮಿಕ ಹೆಜ್ಜೆಗೆ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಯಿತು.
Hindu conference/ ಮಾರುಕೇರಿಯಲ್ಲಿ ಅದ್ದೂರಿ ಹಿಂದೂ ಸಮ್ಮೇಳನ
ಈ ಕುರಿತು ಮಾತನಾಡಿದ ತಹಶೀಲ್ದಾರರು, “ಶಿವರಾತ್ರಿ ಪ್ರಯುಕ್ತ ಮೊದಲ ಬಾರಿಗೆ ಸಿಬ್ಬಂದಿಯೊಂದಿಗೆ ಪಾದಯಾತ್ರೆಯಲ್ಲಿ ಬಂದು ದರ್ಶನ ಪಡೆದಿದ್ದೇನೆ. ಮಹಾ ಮುರುಡೇಶ್ವರನು ಎಲ್ಲಾ ಭಕ್ತರಿಗೆ ಆಯುಷ್ಯ, ಆರೋಗ್ಯ ನೀಡಲಿ” ಎಂದು ಪ್ರಾರ್ಥಿಸಿದರು.
police inspector/ ಭಟ್ಕಳ ಗ್ರಾಮೀಣ ಠಾಣೆಗೆ ನೂತನ ಇನ್ಸ್ಪೆಕ್ಟರ್
ಇನ್ನೊಂದೆಡೆ, ಲೋಕಕಲ್ಯಾಣಾರ್ಥವಾಗಿ ಸತತ ೧೬ನೇ ವರ್ಷದ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಪಾದಯಾತ್ರೆ ನಡೆಯಿತು. ರಂಜನ್ ಇಂಡೇನ್ ಏಜೆನ್ಸಿಯ ಮಾಲೀಕರಾದ ಶಿವಾನಿ ಶಾಂತಾರಾಮ, ಶಾಂತಾರಾಮ ಭಟ್ಕಳ, ಕಿರಣ ಚಂದಾವರ, ಕುಮಾರ ನಾಯ್ಕ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
Woman died/ ವ್ಯಕ್ತಿಯೋರ್ವ ಪದೇ ಪದೇ ಫೋನ್ ಮಾಡಿದ್ದಕ್ಕೆ ನೇಣು ಬಿಗಿದುಕೊಂಡ ಮಹಿಳೆ



