ಹೊನ್ನಾವರ : ರಾಮನವಮಿಯ ಈ ಶುಭ ಸಂದರ್ಭದಲ್ಲಿ ರಾಮತೀರ್ಥದ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಆರಾಧ್ಯ ದೈವ ಪ್ರಭು ಶ್ರೀರಾಮಚಂದ್ರನ ದರ್ಶನ ಪಡೆದರು.
ಇದನ್ನೂ ಓದಿ : ಕಾಗೇರಿ ಗೆಲುವಿಗಾಗಿ ನಡೆದ ಚಂಡಿಕಾ ಹವನ
ಶ್ರೀ ರಾಮೇಶ್ವರ ದೇವಸ್ಥಾನ ಸ್ಥಾಪಿಸಿದ್ದ ಶ್ರೀ ಶ್ರೀಧರ ಸ್ವಾಮೀಜಿಯವರ ಶ್ರೀಧರ ಪಾದುಕೆಯ ದರ್ಶನ ಮಾಡಿ, ನಮಸ್ಕರಿಸಿದರು. ಈ ಸಂದರ್ಭ ಮಾತನಾಡಿದ ಅವರು, ‘ನೂರಾರು ವರ್ಷಗಳ, ಕೋಟ್ಯಂತರ ಹಿಂದುಗಳ ಅಯೋಧ್ಯೆಯ ರಾಮ ಮಂದಿರ ಕನಸು ನನಸಾಗಿದೆ., ಇಂತಹ ಸಂದರ್ಭದಲ್ಲಿ ಪ್ರಭು ಶ್ರೀರಾಮನ ಆದರ್ಶ ಜೀವನ ನಮಗೆ ದಾರಿ ದೀಪವಾಗಬೇಕು’ ಎಂದರು. ಈ ವೇಳೆ ಭಾಜಪಾ ಕಾರ್ಯಕರ್ತರು, ಮುಖಂಡರು, ಜೆಡಿಎಸ್ ಕಾರ್ಯಕರ್ತರು ಇದ್ದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.