ಹೊನ್ನಾವರ : ತಾಲೂಕಿನ ಅರೇಅಂಗಡಿಯ ಎಸ್ ಎಸ್ ಕೆ ಪಿ ಇಂಗ್ಲಿಷ್ ಮೀಡಿಯಂ ಸ್ಕೂಲಿನಲ್ಲಿ ಬೇಸಿಗೆ ರಜಾ ಶಿಬಿರಕ್ಕೆ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ವೇ.ಸುಬ್ರಹ್ಮಣ್ಯ ಭಟ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಇದನ್ನೂ ಓದಿ : ಹೊನ್ನಾವರ ಸರ್ಕಾರಿ ಪಿಯು ಕಾಲೇಜು ಉತ್ತಮ ಸಾಧನೆ
ನಂತರ ಮಾತನಾಡಿ, ದೈವದ ಅಣತಿಯಂತೆ ಗುರುಗಳ ಮಾರ್ಗದರ್ಶನದಲ್ಲಿ ಹಲವು ಚಟುವಟಿಕೆಗಳ ಮೂಲಕ ಮನಸ್ಸನ್ನು ಮುದಗೊಳಿಸುವ ಇಂತಹ ಶಿಬಿರದಲ್ಲಿ ಮಕ್ಕಳು ಭಾಗವಹಿಸಿ ಜ್ಞಾನ ವರ್ಧಿಸಿಕೊಳ್ಳಿ ಎಂಬ ಸಲಹೆ ನೀಡಿದರು.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಶ್ರೀ ಸತ್ಯಸಾಯಿ ಸಂಸ್ಥೆಯ ರಾಜ್ಯಾಧ್ಯಕ್ಷ ರಾಮದಾಸ ಜೆ. ಆಚಾರಿ ಮಾತನಾಡಿ, ಮಕ್ಕಳಲ್ಲಿ ಹುದುಗಿರುವ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಮೂಲ ಆಧಾರ ಬೇಸಿಗೆ ಶಿಬಿರಗಳು. ಇಂತಹ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಎಸ್.ಜೆ.ಕೈರನ್ ಬೇಸಿಗೆ ರಜಾ ಶಿಬಿರದ ಮಹತ್ವ ತಿಳಿಸಿದರು. ಸಂಸ್ಥೆಯ ಸದಸ್ಯರು ಮತ್ತು ಸಂಪನ್ಮೂಲ ವ್ಯಕ್ತಿಗಳು ಪಾಲ್ಗೊಂಡಿದ್ದರು. ಅರೇಅಂಗಡಿಯ ಶಾಲೆಯ ಮುಖ್ಯಾಧ್ಯಾಪಕಿ ಶೈಲಾ ಹೆಗಡೆ ಸ್ವಾಗತಿಸಿದರು. ಶಿಕ್ಷಕಿ ಯಶವಂತಿ ವಂದಿಸಿದರು.