ಹೊಸನಗರ : ಶಿವಮೊಗ್ಗ ರಸ್ತೆಯ ಹೊಸನಗರ ತಾಲೂಕಿನ ಕೋಡೂರಿನ ಅಮ್ಮನಘಟ್ಟ ತಿರುವಿನ ಬಳಿ ಇಂದು ಬೆಳಗಿನ ಜಾವ ಮಂಗಳೂರಿನಿಂದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಗೆ ಇಂಧನ ತುಂಬಿದ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಮಗುಚಿ ಬಿದ್ದಿದೆ.
ಇದನ್ನೂ ಓದಿ : ಮೀಡಿಯಾ ಫಲಕ ಹಾಕಿಕೊಂಡು ಶ್ರೀಗಂಧ ಸಾಗಿಸುತ್ತಿದ್ದ ಗ್ಯಾಂಗ್ ಬಂಧನ
ಈ ಟ್ಯಾಂಕರ್ ಮಗುಚಿದ ಸಮೀಪದಲ್ಲೇ ಅಂದರೆ ಅಮ್ಮನಘಟ್ಟ ಜೇನುಕಲ್ಲಮ್ಮ ದೇವಿಯ ದೇಗುಲದ ಪ್ರವೇಶದ್ವಾರದ ಬಳಿ ಇತ್ತೀಚೆಗಷ್ಟೇ ಪ್ರಾರಂಭಗೊಂಡಿದ್ದ ಪೆಟ್ರೋಲ್ ಬಂಕ್ ಇದೆ. ಇಂಧನ ತುಂಬಿದ ಟ್ಯಾಂಕರ್ ಮಗುಚಿ ಬಿದ್ದು ಆತಂಕ ಸೃಷ್ಟಿಯಾದರೂ ಯಾವುದೇ ಹೆಚ್ಚಿನ ಅನಾಹುತ ಸಂಭವಿಸಿಲ್ಲ.
ಈ ವಿಡಿಯೋ ನೋಡಿ : ೧೦೦ ಜನ ಬನ್ನಿ ಅಂದ್ರೆ ೩೦೦-೪೦೦ ಜನ ಬಂದ್ರೆ ಹೆಂಗೆ? ಈಶ್ವರಪ್ಪ ಪ್ರಶ್ನೆ https://fb.watch/qWj9Ng4OQZ/?mibextid=Nif5oz
ಅಪಘಾತ ಸಂಭವಿಸಿದ ತಕ್ಷಣ ಹೊಸನಗರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿ ಸಂಭವಿಸಬಹುದಾದ ಭಾರೀ ದುರಂತವನ್ನು ತಪ್ಪಿಸಿದ್ದಾರೆ.
ಈ ವಿಡಿಯೋ ನೋಡಿ : ನಾನು ಹೋದಲ್ಲೆಲ್ಲ ರಾಘಣ್ಣ ಫೋನ್ ಮಾಡ್ತಾರೆ https://fb.watch/qWjdQN9O6m/?mibextid=Nif5oz