ಭಟ್ಕಳ: ರಸ್ತೆ ಪಕ್ಕದಲ್ಲಿ ಕಸ ಎಸೆದು ಹೋಗುತ್ತಿದ್ದ ವ್ಯಕ್ತಿಯನ್ನು ಹಿಡಿದು ಆತನಿಂದಲೇ ಸ್ವಚ್ಛತೆ ಮಾಡಿಸಿರುವ ಘಟನೆ ಭಟ್ಕಳದಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಮತ್ತೆ ಕಸ ಎಸೆಯಲಾರ : ಫೇಸ್ಬುಕ್ ರೀಲ್ / ಇನ್ಸ್ಟಾಗ್ರಾಂನಲ್ಲಿ ರೀಲ್
ಈ ಭಾಗದಲ್ಲಿ ಪ್ರತಿ ದಿನ ಕಸ ಎಸೆದು ಹೋಗುತ್ತಿರುವುದನ್ನು ಜಾಲಿ ಪಟ್ಟಣ ಪಂಚಾಯತ ಆರೋಗ್ಯ ಅಧಿಕಾರಿ ವಿನಾಯಕ ಗಮನಿಸುತ್ತಿದ್ದರು. ಅದರಂತೆ ಇಂದು ಸ್ಥಳೀಯ ವ್ಯಕ್ತಿಯೋರ್ವ ಬೈಕ್ ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿ ಸಮೀಪದ ಯಮ್ಮಿಸ್ ಹೋಟೆಲ್ ಸಮೀಪ ಕಸ ಎಸೆದು ಹೋಗುತ್ತಿರುವುದನ್ನು ಸ್ಥಳೀಯ ವ್ಯಕ್ತಿಯೊಬ್ಬರು ಗಮನಿಸಿದ್ದಾರೆ. ತಕ್ಷಣ ಅವರು ಅಲ್ಲೇ ಇದ್ದ ಜಾಲಿ ಪಟ್ಟಣದ ಪಂಚಾಯತ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಅಧಿಕಾರಿ ವಿನಾಯಕ ಅವರಿಗೆ ಸಿಬ್ಬಂದಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಆರೋಗ್ಯ ಅಧಿಕಾರಿ ವಿನಾಯಕ ವ್ಯಕ್ತಿಯನ್ನು ಹಿಡಿದು ಅಲ್ಲಿದ್ದ ಎಲ್ಲ ತ್ಯಾಜ್ಯವನ್ನು ಆತನಿಂದಲೇ ತೆಗೆಸಿ ಸ್ವಚ್ಛಗೊಳಿಸಿದ್ದಾರೆ.
ಇದನ್ನೂ ಓದಿ : ನಾಳೆ ಅಂಕೋಲಾಕ್ಕೆ ಸಿಎಂ ಭೇಟಿ
ಈ ಭಾಗದಲ್ಲಿ ಕೆಲ ದಿನಗಳಿಂದ ಕಸ ಎಸೆಯುತ್ತಿರುವುದನ್ನು ಗಮನಿಸುತ್ತಿದ್ದೆ. ಇಂದು ಸ್ಥಳೀಯ ವ್ಯಕ್ತಿಯ ಸಹಾಯದಿಂದ ಈ ಕೆಲಸ ಮಾಡಲು ಸಾಧ್ಯವಾಗಿದೆ. ಪ್ರತಿಯೊಂದು ಸ್ಥಳಗಳಲ್ಲಿ ಈ ರೀತಿ ಕಸ ಎಸೆಯುವವರಿಂದಲೇ ಈ ರೀತಿ ಕೆಲಸ ಮಾಡಿಸಿದರೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುದನ್ನು ತಡೆಗಟ್ಟಬಹುದು.
– ವಿನಾಯಕ, ಆರೋಗ್ಯ ಅಧಿಕಾರಿ, ಜಾಲಿ ಪ.ಪಂ.
ಇದನ್ನೂ ಓದಿ : ಚಾತುರ್ಮಾಸ್ಯ ವ್ರತಾಚರಣೆಯಲ್ಲಿ ಪಾಲ್ಗೊಳ್ಳಲು ಶ್ರೀಗಳ ಕರೆ