ಕುಮಟಾ: ಮನೆಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿಗೆ ವ್ಯವಸ್ಥೆ ಮಾಡಿದ್ದರೂ ರಸ್ತೆ ಪಕ್ಕ ಸೇರಿದಂತೆ ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಪತ್ತೆಹಚ್ಚಲು ಹೆಗಡೆ ಗ್ರಾಪಂ ಮುಂದಾಗಿದೆ. ಗ್ರಾಮ ಪಂಚಾಯತ ವ್ಯಾಪ್ತಿಯಯನ್ನು ಅನೈರ್ಮಲ್ಯೀಕರಣವಾಗದಂತೆ ಮಾಡಲು ಈಗ ಕ್ರಮಕೈಗೊಂಡಿದೆ. ಈ ಉದ್ದೇಶದಿಂದ ತನ್ನ ವ್ಯಾಪ್ತಿಯ ನಾಲ್ಕು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ.

ಇದನ್ನೂ ಓದಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ
ಹೆಗಡೆ ಗ್ರಾಮ ಪಂಚಾಯತ ವ್ಯಾಪ್ತಿಯ ರೈಲ್ವೆ ಗೇಟ್ ಹತ್ತಿರ ಹಾಗೂ ರೈಲ್ವೆ ರೋಡ್ ಪಕ್ಕದ ರಸ್ತೆಯಲ್ಲಿ ಬಳಸದ, ಅನಗತ್ಯ ವಸ್ತುಗಳು ಹಾಗೂ ಇತರೆ ಕಸವನ್ನು ತಂದು ಎಸೆದು ನೈರ್ಮಲ್ಯ ಹಾಳು ಮಾಡುತ್ತಿರುವುದರ ಬಗ್ಗೆ ಗ್ರಾಪಂಗೆ ಗ್ರಾಮಸ್ಥರು ಎಚ್ಚರಿಸುತ್ತಲೇ ಬಂದಿದ್ದರು. ಅನೇಕ ಬಾರಿ ಪಂಚಾಯತ ಅಧ್ಯಕ್ಷರು, ಸದಸ್ಯರು, ಊರಿನ ಪ್ರಜ್ಞಾವಂತ ನಾಗರಿಕರು ಸ್ವಚ್ಛತೆ ಕಾರ್ಯ ಕೈಗೊಂಡಿದ್ದರು. ಅಲ್ಲದೆ, ಇನ್ನು ಮುಂದೆ ಕಸ ಎಸೆಯದಂತೆ ಎಚ್ಚರಿಸುತ್ತ ಬಂದಿದ್ದರೂ ಅದಕ್ಕೆ ಕ್ಯಾರೇ ಎನ್ನದೇ ಕಸ ಎಸೆಯುವುದು ಮುಂದುವರಿಯುತ್ತಲೇ ಇತ್ತು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಹೆಗಡೆ ಗ್ರಾ.ಪಂ. ವತಿಯಿಂದ ಕಸ ವಿಲೇವಾರಿ ಘಟಕ ಸ್ಥಾಪಿಸಿ ಪ್ರತಿನಿತ್ಯ ಕಸದ ಸಂಗ್ರಹಣಾ ವಾಹನ ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹಣಾ ಕಾರ್ಯ ಮಾಡುತ್ತಿದೆ. ಆದರೂ ಕಸ ಎಸೆದು ಹೋಗುವುದು ಮುಂದುವರಿದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಹೆಗಡೆ ಪಂಚಾಯತ ಅಧ್ಯಕ್ಷ ಮಂಜುನಾಥ ಪಟಗಾರ, ಉಪಾಧ್ಯಕ್ಷೆ ಆಶಾ ನಾಯ್ಕ ಹಾಗೂ ಎಲ್ಲ ಸದಸ್ಯರು ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿ ವೆಂಕಟರಮಣ ಪಟಗಾರ ರವರು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ. ಗ್ರಾ.ಪಂ.ನ ನಾಲ್ಕು ಕಡೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಕಸ ಎಸೆಯುವವರನ್ನು ಪತ್ತೆಹಚ್ಚಲು ಕ್ರಮಕೈಗೊಂಡಿದೆ.  ಅಂಥವರಿಗೆ ಕಾನೂನಾತ್ಮಕವಾಗಿ ಬಿಸಿ ಮುಟ್ಟಿಸಲು ನಿರ್ಧರಿಸಲಾಗಿದೆ.