ಭಟ್ಕಳ : ಮಾರ್ಚ್ ೨೦೨೪ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಇಲ್ಲಿನ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ಉತ್ತಮ ಸಾಧನೆ ಮಾಡಿದೆ. ಪರೀಕ್ಷೆಗೆ ಹಾಜರಾದ ೩೦೭ ವಿದ್ಯಾರ್ಥಿಗಳಲ್ಲಿ ೩೦೭ ವಿದ್ಯಾರ್ಥಿಗಳು ಉತ್ತೀರ್ಣರಾಗಿ ೧೦೦% ಫಲಿತಾಂಶ ದಾಖಲಿಸಿದೆ. ೧೨೨ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ೧೮೫ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ಸಿದ್ದಾರ್ಥ ಪದವಿ ಪೂರ್ವ ಕಾಲೇಜಿಗೆ ಶೇ.೧೦೦ ಫಲಿತಾಂಶ
ವಾಣಿಜ್ಯ ವಿಭಾಗ :
ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜು ವಾಣಿಜ್ಯ ವಿಭಾಗದಲ್ಲಿ ಮಹಾವಿದ್ಯಾಲಯವು ೧೦೦%ಫಲಿತಾಂಶ ದಾಖಲಿಸಿದ್ದು ಆಶೀತಾ ಅನಂತ ಮೊಗೇರ ೯೭.೬೬% ನೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅರ್ಜುನ ಆರ್.ಬಿ ಹಾಗೂ ಸನತ ಕಿಣಿ ೯೭.೧೬% ನೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸಂದೇಶ ಆಚಾರ್ಯ ೯೭% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ವಿಜ್ಞಾನ ವಿಭಾಗ :
ವಿಜ್ಞಾನ ವಿಭಾಗದಲ್ಲಿ ಮಹಾವಿದ್ಯಾಲಯವು ೧೦೦% ಫಲಿತಾಂಶ ದಾಖಲಿಸಿದೆ. ಹರ್ಷೀತಾ ಮಾಸ್ತಿ ನಾಯ್ಕ ೯೬.೧೬% ನೊಂದಿಗೆ ಪ್ರಥಮ, ಮೇಘಾ ನಾಗಪ್ಪ ನಾಯ್ಕ ೯೫.೫% ನೊಂದಿಗೆ ದ್ವಿತೀಯ ಮತ್ತು ರಶ್ಮಿ ಆರ್.ನಾಯ್ಕ ಹಾಗೂ ರಮ್ಯ ೯೫.೧% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
ಕಲಾ ವಿಭಾಗ :
ಕಲಾ ವಿಭಾಗದಲ್ಲಿ ಮಹಾವಿದ್ಯಾಲಯವು ೧೦೦% ಫಲಿತಾಂಶ ದಾಖಲಿಸಿದ್ದು ಪೂಜಾ ಮಂಜುನಾಥ ಖಾರ್ವಿ ಹಾಗೂ ಚಂದ್ರಶೇಖರ ನಾಗಪ್ಪ ಗೊಂಡ ೯೫.೫% ನೊಂದಿಗೆ ಪ್ರಥಮ, ಅರುಣ ರಾಮಯ್ಯ ಗೊಂಡ ೯೧.೧೬% ನೊಂದಿಗೆ ದ್ವಿತೀಯ ಮತ್ತು ಸೌಮ್ಯ ಸುಬ್ರಾಯ ನಾಯ್ಕ ೮೬.೮೩% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
೧೦೦ಕ್ಕೆ ೧೦೦ ಅಂಕ :
ವಿದ್ಯಾರ್ಥಿಗಳಾದ ಪ್ರಜ್ವಲ ನಾಯಕ ಹಾಗೂ ಪ್ರಸಾದ ಉಲ್ಮನ ಲೆಕ್ಕಶಾಸ್ತ್ರ, ಅರ್ಜುನ ಆರ್.ಬಿ ಹಾಗೂ ಆಶೀತಾ ಮೊಗೇರ ಅರ್ಥಶಾಸ್ತ್ರ, ಅಮೃತಾ ಪೈ, ಸನತ ಕಿಣಿ, ಅನನ್ಯ ರಾಯ್ಕರ ಹಾಗೂ ಪ್ರಜ್ಞಾ ನಾಯ್ಕ ಗಣಕ ವಿಜ್ಞಾನ, ಸಂದೇಶ ಆಚಾರ್ಯ ಕನ್ನಡ ವಿಷಯಗಳಲ್ಲಿ ೧೦೦/೧೦೦ ಅಂಕಗಳನ್ನು ಪಡೆದುಕೊಂಡಿರುತ್ತಾರೆ.
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವಿದ್ಯಾರ್ಥಿಗಳ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಸುರೇಶ ನಾಯಕ್, ಮ್ಯಾನೇಜಿಂಗ್ ಟ್ರಸ್ಟಿ ಆರ್. ಜಿ. ಕೊಲ್ಲೆ, ಟ್ರಸ್ಟಿ ಮೆನೇಜರ್ ರಾಜೇಶ ನಾಯಕ್ ಹಾಗೂ ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದಾರೆ.