ಭಟ್ಕಳ : ಪತ್ರಿಕೋದ್ಯಮವ ವಿಷಯ ಮತ್ತು ಹುದ್ದೆ ನಿಭಾಯಿಸುವ ಪೂರ್ವದಲ್ಲಿ ನಮ್ಮಲ್ಲಿಯೇ ಗೊಂದಲ ಉಂಟಾಗುತ್ತದೆ. ಪ್ರಜಾಪ್ರಭುತ್ವದ ರಕ್ಷಣೆಗೆ ಕಾವಲುಗಾರರಾಗಿ ಪತ್ರಕರ್ತರ ಪಾತ್ರ ಬಹುಮುಖ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಇಲ್ಲಿನ ಶ್ರೀ ಗುರು ಸುಧೀಂದ್ರ ಕಾಲೇಜಿನ ಇನ್ಫೋಸಿಸ್ ಬ್ಲಾಕನಲ್ಲಿ ಗುರುವಾರ(ಜುಲೈ ೧೮) ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮವನ್ನು ದೀಪ‌ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ.ಮೋಗೇರ, ನ್ಯಾಯ ಸತ್ಯದ ಹಾದಿಯಲ್ಲಿ ಸಮಾಜವನ್ನು ಕರೆದೊಯ್ಯುವ ಕಾರ್ಯ ಪತ್ರಕರ್ತರದ್ದಾಗಿದೆ. ತಪ್ಪು ಸರಿಪಡಿಸುವ ಕೆಲಸದ ಜೊತೆಗೆ ಸಮಾಜದ ಜವಾಬ್ದಾರಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಆ ಮೂಲಕ ಸಮಾಜ ಬಲಾಢ್ಯವಾಗಬೇಕಾದರೆ ಪತ್ರಕರ್ತರ ಅವಶ್ಯಕತೆ ತುಂಬಾ ಇದೆ ಎಂದರು.

ಇದನ್ನೂ ಓದಿ : ಸಶಸ್ತ್ರ ಕಾನ್ಸ್‌ಟೇಬಲ್ ಹುದ್ದೆಗೆ ದೇಹದಾರ್ಢ್ಯತೆ- ಸಹಿಷ್ಣುತೆ ಪರೀಕ್ಷೆ ಜು.೨೨ರಂದು

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮಜ್ಲಿಸೆ ಓ ತಂಜೀಂ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಮಾತನಾಡಿದ, ‘ವಿದ್ಯಾರ್ಥಿಗಳ ಜೊತೆಗೆ ಕಾರ್ಯಕ್ರಮ ಮಾಡುವುದರಿಂದ ಅವರಿಗೆ ಪತ್ರಿಕೋದ್ಯಮದ ಬಗ್ಗೆ ಮಾಹಿತಿ ಸಿಗಲಿದೆ. ಪತ್ರಕರ್ತರ ಪೆನ್ನಿನ ಶಾಯಿಯು ವ್ಯಕ್ತಿಯನ್ನು ಯಾವ ರೀತಿಯಲ್ಲಿಯಾದರೂ ತೋರ್ಪಡಿಸಬಹುದಾಗಿದೆ. ಸರಕಾರದ ಕಾರ್ಯಕ್ರಮ ಸಹ ಪತ್ರಕರ್ತರಿಂದಲೇ ಬಡವರಿಗೆ ತಲುಪುವಂತಾಗಿದೆ. ಜೀವನದಲ್ಲಿ ಯಾವತ್ತೂ ಧೈರ್ಯ ಮಾಡಿ ಮುಂದೆ ಹೋಗಬೇಕು. ಆಗ ಮಾತ್ರ ಬದುಕು ಸಾಧಿಸಲು ಸಾಧ್ಯ ಎಂದು ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ : ಶಿರೂರು ಗುಡ್ಡಕುಸಿತ ದುರ್ಘಟನೆ : ಪತ್ತೆಯಾಗದ ಕುಮಟಾದ ಜಗನ್ನಾಥ ನಾಯ್ಕ

ಮುಖ್ಯ ಅತಿಥಿಗಳಾಗಿ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಟ್ರಸ್ಟಿ ನಾಗೇಶ ಭಟ್ ಮಾತನಾಡಿ, ‘2011ರಲ್ಲಿ ಕೊನೆಯ ಬಿ.ಎ. ಬ್ಯಾಚ್ ಆಗಿತ್ತು. ಈ ಹಿನ್ನೆಲೆ ನಮ್ಮ ಕಾಲೇಜು ಬಿ.ಎ. ಪತ್ರಿಕೋದ್ಯಮ ಆರಂಭಿಸುವ ಚಿಂತನೆ ಮಾಡಿ 6ನೇ ವರ್ಷದಲ್ಲಿ ಮುಂದುವರಿಯುತ್ತಿದೆ. ಶಿರಸಿಯ ನಂತರ ಭಟ್ಕಳದ ನಮ್ಮ ಕಾಲೇಜಿನಲ್ಲಿ ಪತ್ರಿಕೋದ್ಯಮ ಆರಂಭಿಸಿದ ಕಾಲೇಜು. ಇದೊಂದು ಉತ್ತಮ ಸಮಾಗಮ ಕಾರ್ಯಕ್ರಮ ಆಗಿದೆ. ನಮ್ಮ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಕಲಿಕೆಗೆ ಅವಕಾಶ ಸಿಕ್ಕಿದಂತಾಗಿದೆ. ಭಟ್ಕಳದ ಎಲ್ಲಾ ಪತ್ರಕರ್ತರು ಸಮಾಜದಲ್ಲಿ ಉತ್ತಮ ಘನತೆಯನ್ನು ಹೊಂದಿದ್ದಾರೆ ಮತ್ತು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕೇವಲ ಪತ್ರಕರ್ತರಾಗದೆ ಅವರ ಸನ್ನಡತೆ ಮತ್ತು ಜನರೊಂದಿಗಿನ ಬೆರೆಯುವಿಕೆಯನ್ನು ನಾವೆಲ್ಲ ಗಮನಿಸಿದ್ದೇವೆ. ಇದನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ನಮ್ಮ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿತ ಪಾಠದ ಜೊತೆಗೆ ಅವರಿಗೆ ಸ್ಥಳ ವರದಿ ಮಾಡಲು ಭಟ್ಕಳ ಪತ್ರಕರ್ತರು ಹಾಗೂ ಸಂಘವು ಅವಕಾಶ ಮಾಡಿಕೊಡಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾಗಲಿದೆ ಎಂದರು.

ಇದನ್ನೂ ಓದಿ : ರಾಬಿತಾ ಎಕ್ಸಲೆನ್ಸ್ ಅವಾರ್ಡ್ ನ್ಯೂ ಶಮ್ಸ್ ಸ್ಕೂಲ್ ಮಡಿಲಿಗೆ

ಹಿರಿಯ ಪತ್ರಕರ್ತ, ಸಂಘದ ಗೌರವಾಧ್ಯಕ್ಷ ಸತೀಶ‌ಕುಮಾರ ನಾಯ್ಕ ಮಾತನಾಡಿ, ಪತ್ರಿಕಾ ಧರ್ಮದ ಜೊತೆಗೆ ಮಾನವೀಯತೆಯನ್ನು ಗಮನಿಸಿ ವರದಿಗಾರಿಕೆ ಮಾಡಬೇಕು. ಪ್ರಭುದ್ದತೆಯ ಜೊತೆಗೆ ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದರು.

ಇದನ್ನೂ ಓದಿ : ಮೃತರ ಕುಟುಂಬಕ್ಕೆ ೫ ಲಕ್ಷ, ಮನೆ ಹಾನಿಗೆ ೧.೨೫ ಲಕ್ಷ ರೂ. ಪರಿಹಾರ

ಅಧ್ಯಕ್ಷತೆಯನ್ನು ವಹಿಸಿದ್ದ ಭಟ್ಕಳ ತಾಲೂಕು ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ಹೆಬ್ಬಾರ ಮಾತನಾಡಿ, ಪತ್ರಕರ್ತರು ಮತ್ತು ಪತ್ರಿಕೆಗೆ ಮಹತ್ವದ ಸ್ಥಾನ ಇದೆ. ಇದು ನಮಗೆ ಹೆಮ್ಮೆಯ ಸಂಗತಿ. ಸಾಮಾಜಿಕ ಜಾಲತಾಣದ ಅಬ್ಬರದ ನಡುವೆ ಪತ್ರಿಕೆಗೆ ಉನ್ನತ ಮಹತ್ವವಿದೆ. ಇಂದಿನ ಯುವಕರಲ್ಲಿ ಪತ್ರಿಕೆ ಓದುವುದು ಕಡಿಮೆಯಾಗಿದೆ. ಪತ್ರಿಕೆಯ ಮಾಹಿತಿಯಿಂದ ಜ್ಞಾನ ಲಭಿಸಲಿದೆ. ಉನ್ನತ ಸ್ಥಾನದಲ್ಲಿದ್ದವರು ಸಮಾಜದಲ್ಲಿ ಮಾಡಿದ ತಪ್ಪಿಗೆ ಪತ್ರಿಕೆಯಿಂದ ಶಿಕ್ಷೆ ಸಿಕ್ಕಿದೆ. ನಮ್ಮ ಭಟ್ಕಳದಲ್ಲಿಯೂ ಕೆಲ ಪತ್ರಕರ್ತರು ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದ ಉದಾಹರಣೆ ಇದೆ. ರಾಜ್ಯ ಮತ್ತು ಕೇಂದ್ರ ಸರಕಾರ ಪತ್ರಕರ್ತರನ್ನು ಕಡೆಗಣಿಸುತ್ತಿದ್ದಾರೆ. ಆರೋಗ್ಯ ಕಾರ್ಡನ್ನು ಇನ್ನೂ ತನಕ ಜಾರಿಗೆ ತಂದಿಲ್ಲ. ತಾಲೂಕು ಮಟ್ಟದ ವರದಿಗಾರರು ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡುವವರಿಗೆ ಸರಕಾರಗಳು ಗಮನ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ : ಆಷಾಢ ಏಕಾದಶಿ ನಿಮಿತ್ತ ಲಕ್ಷ ತುಳಸಿ ಅರ್ಚನೆ

ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ ಪೈ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಹಿರಿಯ ಪತ್ರಕರ್ತ ರಾಧಾಕೃಷ್ಣ ಭಟ್ಟ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಮನಮೋಹನ ನಾಯ್ಕ ಸ್ವಾಗತಿಸಿದರು. ಖಜಾಂಚಿ ಮೋಹನ ನಾಯ್ಕ, ಈಶ್ವರ ನಾಯ್ಕ ಮತ್ತು ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿ ಲಿಡಿಯಾ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ಎಮ್.ಆರ್. ಮಾನ್ವಿ ವಂದಿಸಿದರು.

ಇದನ್ನೂ ಓದಿ : ಹೆರಾಡಿ ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

ಇದೇ ವೇಳೆ ಅಂಕೋಲಾದಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಸಾವನ್ನಪ್ಪಿದವರಿಗಾಗಿ ಒಂದು ನಿಮಿಷ ಮೌನಾಚರಣೆ ನಡೆಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪತ್ರಿಕಾ ವಿತರಕರಾದ ಗಣೇಶ ಮಂಜಯ್ಯ ನಾಯ್ಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ಶ್ರೀ ಗುರು ಸುಧೀಂದ್ರ ಕಾಲೇಜು ಬಿ.ಎ. ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.